ADVERTISEMENT

‘ಕಚೇರಿಯಿಂದ ಕೆಲಸ ವ್ಯವಸ್ಥೆ ಪ್ರಾರಂಭಿಸಿ’

​ಪ್ರಜಾವಾಣಿ ವಾರ್ತೆ
Published 7 ಜನವರಿ 2021, 19:13 IST
Last Updated 7 ಜನವರಿ 2021, 19:13 IST
ಪಿ.ಸಿ. ರಾವ್
ಪಿ.ಸಿ. ರಾವ್   

ಬೆಂಗಳೂರು: ‘ಮನೆಯಿಂದಲೇ ಕೆಲಸ ಮಾಡುವ ವ್ಯವಸ್ಥೆ ಆರಂಭವಾದಾಗಿನಿಂದ ಮಾಹಿತಿ ತಂತ್ರಜ್ಞಾನ ಕಂಪನಿಗಳನ್ನು ಪರೋಕ್ಷವಾಗಿ ಅವಲಂಬಿಸಿದ್ದ ಹಲವರು ಸಂಕಷ್ಟಕ್ಕೆ ಸಿಲುಕಿದ್ದಾರೆ. ‘ವರ್ಕ್‌ ಫ್ರಂ ಹೋಂ’ ವ್ಯವಸ್ಥೆ ರದ್ದುಗೊಳಿಸಲು ಸರ್ಕಾರ ಮುಂದಾಗಬೇಕು’ ಎಂದು ಬೆಂಗಳೂರು ಹೋಟೆಲುಗಳ ಸಂಘದ ಅಧ್ಯಕ್ಷ ಪಿ.ಸಿ. ರಾವ್ ಕೋರಿದ್ದಾರೆ.

‘ನಗರದಲ್ಲಿ 12 ಸಾವಿರಕ್ಕೂ ಹೆಚ್ಚು ಐಟಿ ಕಂಪನಿಗಳಿವೆ. ಈ ಪೈಕಿ ಬಹುತೇಕ ಕಂಪನಿಗಳಲ್ಲಿ ಈಗಲೂ ಮನೆಯಿಂದ ಕೆಲಸ ಮಾಡುವ ವ್ಯವಸ್ಥೆಯೇ ಮುಂದುವರಿದಿದೆ. ಈ ವಲಯವನ್ನೇ ನಂಬಿಕೊಂಡಿರುವ ಹೋಟೆಲ್‌ ಉದ್ಯಮದಾರರು, ಫುಡ್‌ ಕೋರ್ಟ್‌ ಮತ್ತು ಕೆಟರಿಂಗ್ ಮಡುವವರು, ಟ್ರಾವೆಲ್ಸ್‌ನವರು, ಹೌಸ್‌ ಕೀಪಿಂಗ್ ನವರಿಗೆ ಉದ್ಯೋಗವಿಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದಾರೆ’ ಎಂದು ಅವರು ಹೇಳಿದ್ದಾರೆ.

‘ವರ್ಕ್‌ ಫ್ರಂ ಹೋಂ ವ್ಯವಸ್ಥೆಯನ್ನು ಹಂತ–ಹಂತವಾಗಿ ತೆಗೆದು ಹಾಕಿ ಕಚೇರಿಯಿಂದಲೇ ಕೆಲಸ ಮಾಡುವ ವ್ಯವಸ್ಥೆ ಮರುಜಾರಿ ಮಾಡಲು ಐಟಿ ಕಂಪನಿಗಳಿಗೆ ಸೂಚಿಸಬೇಕು’ ಎಂದು ಅವರು ಒತ್ತಾಯಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.