ಬೆಂಗಳೂರು: ನಮ್ಮ ಮೆಟ್ರೊ ಹಳದಿ ಮಾರ್ಗದಲ್ಲಿ ಸಂಚರಿಸಲು ಪಶ್ಚಿಮ ಬಂಗಾಳದಿಂದ ರವಾನೆಯಾಗಿದ್ದ ನಾಲ್ಕನೇ ರೈಲಿನ ಎಲ್ಲ ಕೋಚ್‌ಗಳು (ಬೋಗಿ) ಬೆಂಗಳೂರು ತಲುಪಿವೆ.
ಒಂದು ಕೋಚ್ ನಮ್ಮ ಮೆಟ್ರೊ ಹೆಬ್ಬಗೋಡಿ ಡಿಪೊಗೆ ಬುಧವಾರ ತಲುಪಿತ್ತು. ಉಳಿದ ಐದು ಕೋಚ್‌ಗಳು ಶುಕ್ರವಾರ ತಲುಪಿವೆ.
‘ಎಲ್ಲ ಕೋಚ್‌ಗಳನ್ನು ಅನ್‌ಲೋಡ್ ಮಾಡಲಾಗಿದೆ. ಇನ್ನೆರಡು ದಿನಗಳಲ್ಲಿ ಪರೀಕ್ಷೆ ಆರಂಭಿಸಲಾಗುವುದು. ಹಳದಿ ಮಾರ್ಗದಲ್ಲಿ ವಾಣಿಜ್ಯ ಸಂಚಾರ ಇರುವುದರಿಂದ ಹಗಲು ಹೊತ್ತಿನಲ್ಲಿ ಪರೀಕ್ಷೆ ನಡೆಸಲು ಸಾಧ್ಯವಾಗುವುದಿಲ್ಲ. ರಾತ್ರಿ ವೇಳೆ ಪರೀಕ್ಷೆಗಳನ್ನು ನಡೆಸಲಾಗುವುದು. ಮೂರು ವಾರ ಪರೀಕ್ಷೆ ನಡೆಯಲಿದೆ’ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.