ADVERTISEMENT

ಯಶವಂತಪುರ-ಕಾರಟಗಿ ರೈಲು: ಮಾರ್ಗ ಬದಲಾವಣೆ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2023, 13:59 IST
Last Updated 22 ಸೆಪ್ಟೆಂಬರ್ 2023, 13:59 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಬೆಂಗಳೂರು: ಬಳ್ಳಾರಿ ರೈಲು ನಿಲ್ದಾಣದಲ್ಲಿ ಅಮೃತ ಭಾರತ ನಿಲ್ದಾಣ ಯೋಜನೆಯಡಿ ಕಾಮಗಾರಿ ಆರಂಭಿಸಿರುವ ಹಿನ್ನೆಲೆಯಲ್ಲಿ,  ಈ ನಿಲ್ದಾಣದ ಮೂಲಕ ಸಂಚರಿಸುತ್ತಿದ್ದ ಯಶವಂತಪುರ–ಕಾರಟಗಿ ರೈಲು ಮಾರ್ಗದಲ್ಲಿ ಬದಲಾವಣೆ ಮಾಡಲಾಗಿದೆ.

ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿರುವ ನೈರುತ್ಯ ರೈಲ್ವೆ, ‘ಬಳ್ಳಾರಿ ರೈಲು ನಿಲ್ದಾಣದ ಪ್ಲಾಟ್ ಫಾರ್ಮ್-3ರಲ್ಲಿ ಕಾಮಗಾರಿ ನಡೆಯುತ್ತಿದೆ. ಪ್ರಯಾಣಿಕರ ಓಡಾಟ ನಿರ್ಬಂಧಿಸಿರುವುದರಿಂದ ರೈಲು ಮಾರ್ಗದಲ್ಲಿ ಬದಲಾವಣೆ ಮಾಡಲು ನಿರ್ಧರಿಸಲಾಗಿದೆ’ ಎಂದಿದ್ದಾರೆ.

ADVERTISEMENT

‘ಸೆ. 24ರಿಂದ ಅ. 23ರವರೆಗೆ ಯಶವಂತಪುರ ನಿಲ್ದಾಣದಿಂದ ಹೊರಡುವ ರೈಲು (16545) ಓಬಳಾಪುರ, ಬಳ್ಳಾರಿ ಬೈಪಾಸ್ ಕ್ಯಾಬಿನ್, ಬಳ್ಳಾರಿ ಕಂಟೋನ್ಮೆಂಟ್ ಮತ್ತು ಕುಡತಿನಿ ನಿಲ್ದಾಣಗಳ ಮೂಲಕ ಕಾರಟಗಿಗೆ ಸಂಚರಿಸಲಿದೆ. ಬಳ್ಳಾರಿ ಜಂಕ್ಷನ್‌ನಲ್ಲಿ ನಿಲುಗಡೆ ಇರುವುದಿಲ್ಲ.’

‘ಸೆ. 25ರಿಂದ ಅ. 24ರವರೆಗೆ ಕಾರಟಗಿ ನಿಲ್ದಾಣದಿಂದ ಹೊರಡುವ ರೈಲು (16546) ಕುಡತಿನಿ, ಬಳ್ಳಾರಿ ಕಂಟೋನ್ಮೆಂಟ್, ಬಳ್ಳಾರಿ ಬೈಪಾಸ್ ಕ್ಯಾಬಿನ್ ಮತ್ತು ಓಬಳಾಪುರ ನಿಲ್ದಾಣ ಮೂಲಕ ಯಶವಂತಪುರ ತಲುಪಲಿದೆ. ಪ್ರಯಾಣಿಕರ ಅನುಕೂಲಕ್ಕಾಗಿ ಬಳ್ಳಾರಿ ಕಂಟೋನ್ಮೆಂಟ್ ನಿಲ್ದಾಣದಲ್ಲಿ ರೈಲು 5 ನಿಮಿಷ ಹೆಚ್ಚುವರಿಯಾಗಿ ನಿಲ್ಲಲಿದೆ’ ಎಂದು ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.