ADVERTISEMENT

ಗ್ರಾಪಂ ಸದಸ್ಯರ ವೇತನ ಹೆಚ್ಚಳ: ಹೋರಾಟ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2011, 8:40 IST
Last Updated 12 ಸೆಪ್ಟೆಂಬರ್ 2011, 8:40 IST

ಔರಾದ್: ಗ್ರಾಮ ಪಂಚಾಯ್ತಿ ಅಧ್ಯಕ್ಷ-ಉಪಾಧ್ಯಕ್ಷ ಮತ್ತು ಸದಸ್ಯರ ವೇತನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗಾಗಿ ಒತ್ತಾಯಿಸಿ ಹೋರಾಟ ಮಾಡಲಾಗುವುದು ಎಂದು ಗ್ರಾಮ ಪಂಚಾಯ್ತಿ ಪ್ರತಿನಿಧಿ ಒಕ್ಕೂಟದ ಜಿಲ್ಲಾ ಅಧ್ಯಕ್ಷ ವಿಜಯಕುಮಾರ ಸೋನಾರೆ ಹೇಳಿದರು.

ಇಲ್ಲಿಯ ತಾಲ್ಲೂಕು ಪಂಚಾಯ್ತಿ ಸಭಾಂಗಣದಲ್ಲಿ ಭಾನುವಾರ ಗ್ರಾಮ ಪಂಚಾಯ್ತಿ ಅಧ್ಯಕ್ಷ-ಉಪಾಧ್ಯಕ್ಷ ಮತ್ತು ಸದಸ್ಯರ ಸಭೆ ಉದ್ದೇಶಿಸಿ ಮಾತನಾಡಿದರು. ಪಂಚಾಯತ್ ರಾಜ್ ಕಾಯ್ದೆ ಪ್ರಕಾರ ಪಂಚಾಯ್ತಿಗಳಿಗೆ ಎಲ್ಲ ಅಧಿಕಾರ ಮತ್ತು ಸೌಲಭ್ಯ ಕೊಡಬೇಕು.

ಆದರೆ ಶಾಸಕರುಗಳು ಮತ್ತು ಜಿಲ್ಲಾ ಪಂಚಾಯ್ತಿಯವರು ಗ್ರಾಮ ಪಂಚಾಯ್ತಿಯಲ್ಲಿ ಅನಗತ್ಯ ಹಸ್ತಕ್ಷೇಪ ಮಾಡಿ ನಮ್ಮ ಅಧಿಕಾರ ಕಸಿದುಕೊಳ್ಳುತ್ತಿದ್ದಾರೆ. ಬಿಆರ್‌ಜಿಎಫ್, ನಂಜುಂಡಪ್ಪ ಸೇರಿದಂತೆ ಕೆಲವು ಅನುದಾನ ಗ್ರಾಮೀಣ ಪ್ರದೇಶದ ಅಭಿವೃದ್ಧಿಗಾಗಿ ಮೀಸಲಾಗಿವೆ. ಆದರೆ ಈ ಬಗ್ಗೆ ಪಂಚಾಯ್ತಿಗಳಿಗೆ ಯಾವುದೇ ಮಾಹಿತಿಯೂ ನೀಡುತ್ತಿಲ್ಲ ಎಂದರು.

ಒಕ್ಕೂಟ ರಚನೆ: ತಾಲ್ಲೂಕಿನ ವಿವಿಧ ಗ್ರಾಮ ಪಂಚಾಯ್ತಿ ಪ್ರತಿನಿಧಿಗಳು ಪಾಲ್ಗೊಂಡ ಸಭೆಯಲ್ಲಿ ಕರ್ನಾಟಕ ರಾಜ್ಯ ಗ್ರಾಮ ಪಂಚಾಯ್ತಿ ಅಧ್ಯಕ್ಷ ಉಪಾಧ್ಯಕ್ಷ ಮತ್ತು ಸದಸ್ಯರ ತಾಲ್ಲೂಕು ಒಕ್ಕೂಟ ರಚಿಸಲಾಯಿತು.

ರಾಜಕುಮಾರ ಶೆಟಕಾರ ಬಳತ (ಬಿ) (ಗೌರವಾಧ್ಯಕ್ಷ), ಶಿವಕುಮಾರ ಸಜ್ಜನಶೆಟ್ಟಿ ಠಾಣಾಕುಶನೂರ (ಅಧ್ಯಕ್ಷ), ಬಾಬುರಾವ ಕೌಠಾ  (ಕಾರ್ಯುದರ್ಶಿ), ಸ್ವಾಮಿದಾಸ ಉಜನಿಕರ್, ರೂಪಾವತಿ ರಾಜಕುಮಾರ ಬೆಳಕುಣಿ, ಹಣಮಂತ ಸೂರ್ಯವಂಶಿ ಹೊಕ್ರಾಣಾ ಉಪಾಧ್ಯಕ್ಷರಾಗಿ ಆಯ್ಕೆಯಾದರು.

ಶರಣಪ್ಪ ಪಾಟೀಲ ಇಟಗ್ಯಾಳ, ಬಾಬುಮಿಯಾ ಸಂತಪುರ, ಸೂರ್ಯಕಾಂತ ಬಚ್ಚನ ಖೇಡ ಸಹ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ. ನೆಹರು, ಅನೀಲ ಮೊರಗೆ, ದಯಾನಂದ ವಡ್ಡೆ, ಶಾಲಿವಾನ ಪಾಟೀಲ, ತೇಜಾರಾವ ಮೂಳೆ, ಶಿವಾಜಿರಾವ ತುಕಾರಾಮ, ಶಾರದಾಬಾಯಿ ಕಿಶನರಾವ, ಕಾಶಪ್ಪ ದಬಾಳೆ, ಸನ್ಮುಖ ಲಾಧಾ, ಹಣಮಂತ ನೇಳಗೆ, ವಿಮಲಾಬಾಯಿ ಚಿಕ್ಲಿ, ನಯೂಮ ಬೆಳಕುಣಿ ಇವರು ಒಕ್ಕೂಟದ ನಿರ್ದೇಶಕರಾಗಿರುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT