ADVERTISEMENT

ರಕ್ತದಾನದಿಂದ ಆರೋಗ್ಯ ವೃದ್ಧಿ: ಅಗ್ನಿ

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2013, 5:57 IST
Last Updated 6 ಸೆಪ್ಟೆಂಬರ್ 2013, 5:57 IST

ಹುಮನಾಬಾದ್: `ವಜ್ರ, ರತ್ನಕಿಂತ ರಕ್ತ ಅಮೂಲ್ಯ' ಎಂದು ಸಬ್‌ಇನ್‌ಸ್ಪೆಕ್ಟರ್ ಎಲ್.ಬಿ.ಅಗ್ನಿ ತಿಳಿಸಿದರು.

ಪಟ್ಟಣದ ಆರ್ಬಿಟ್ ಸಂಸ್ಥೆಯ ದ್ವಿದಶಮಾನೋ ತ್ಸವ ಮತ್ತು ಸಂಸ್ಥೆ ಪಾಲಕಿ ಪುನಿತ್ ಮದರ್ ತೇರೆಸಾ ಅವರ ಸ್ಮರಣಾರ್ಥ ಗುರುವಾರ ಏರ್ಪಡಿಸಿದ್ದ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು.

ರಕ್ತದಾನದಿಂದ ನಿಶ್ಯಕ್ತರಾಗುತ್ತಾರೆ ಎಂಬ ಕಾರಣಕ್ಕಾಗಿ ಸಾಕಷ್ಟು ಜನ ರಕ್ತ ನೀಡಲು ಹಿಂದೇಟು ಹಾಕುತ್ತಾರೆ. ದಾನ ಮಾಡುವುದರಿಂದ ದೇಹದಲ್ಲಿ ಹೊಸ ರಕ್ತ ವೃದ್ಧಿಸುತ್ತದೆ. ಜನಸಾಮಾನ್ಯರಲ್ಲಿ ಈ ಕುರಿತು ಜಾಗೃತಿ ಮೂಡಿಸಿದರೆ ಎಲ್ಲರೂ ರಕ್ತದಾನ ಮಾಡುವುದಕ್ಕೆ ಸ್ವಯಂ ಪ್ರೇರಣೆಯಿಂದ ಮುಂದೆ ಬರುತ್ತಾರೆ ಎಂದರು.

ಆರ್ಬಿಟ್ ಸಂಸ್ಥೆ ನಿರ್ದೇಶಕ ಫಾದರ್ ಬಾಪು ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಫಾದರ್ ಲಿಯೋ ವೇಗಸ್, ಫಾದರ್ ವಿಕ್ಟರ್, ಲಲಿತಾ ಇದ್ದರು.

ಶಿಬಿರದಲ್ಲಿ 115 ಜನ ರಕ್ತದಾನ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.