ADVERTISEMENT

ವೀರಭದ್ರೇಶ್ವರ ಪಲ್ಲಕ್ಕಿ ಉತ್ಸವಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 15 ಜನವರಿ 2012, 10:45 IST
Last Updated 15 ಜನವರಿ 2012, 10:45 IST

ಹುಮನಾಬಾದ್: ಪ್ರತೀ ವರ್ಷದಂತೆ ಈ ವರ್ಷವು ಇಲ್ಲಿನ ವೀರಭದ್ರೆಶ್ವರ ಜಾತ್ರೆ ಸಂಬಂಧ ಸಂಕ್ರಾಂತಿಯಂದು ಶನಿವಾರ ರಾತ್ರಿ ದೇವರ ಪಲ್ಲಕ್ಕಿ ಉತ್ಸವಕ್ಕೆ ವಿದ್ಯುಕ್ತ ಚಾಲನೆ ನೀಡಲಾಯಿತು.

ಹಿರೇಮಠದ ಗಂಗಾಧರ ಸ್ವಾಮಿಜಿ ಅವರನ್ನು ವಾದ್ಯಗಳ ಸಮೇತ ಗೌರವಪೂರ್ವಕವಾಗಿ ದೇವಸ್ಥಾನಕ್ಕೆ
ಕರೆದು ತರಲಾಯಿತು. ನಂತರ ಮಂಗಳಾರತಿ ಬಳಿಕ ಪಲ್ಲಕ್ಕಿ ಉತ್ಸವ ಆರಂಭಗೊಂಡು ದೇವಸ್ಥಾನ ಹಿಂಬದಿ ಮಾರ್ಗದಿಂದ ಹನುಮಂತ ದೇವಸ್ಥಾನ ತಲುಪಿತು. ನಂತರ ಪರಂಪರೆಯಂತೆ ಶಲ್ಯೆ ಸುಡುವ ಪ್ರಕ್ರೀಯೆ ಆರಂಭಗೊಂಡಿತು.

ವಿಧಾನ ಪರಿಷತ್ ಸದಸ್ಯ ಬಸವರಾಜ ಪಾಟೀಲ, ಶಾಸಕ ರಾಜಶೇಖರ ಪಾಟೀಲ, ಜಿಲ್ಲಾ ಪಂಚಾಯಿತಿ ಸದಸ್ಯ ಹಾಗೂ ದೇವಸ್ಥಾನ ವ್ಯವಸ್ಥಾಪಕ ಮಂಡಳಿ ಪ್ರಮುಖ ವೀರಣ್ಣ ಪಾಟೀಲ, ಶರಣಪ್ಪಗೌಡ ಎನ್.ಪಾಟೀಲ, ಮಲ್ಲಿಕಾರ್ಜುನ ಮಾಳಶೆಟ್ಟಿ, ಸುಭಾಷ ಕಮಲಾಪೂರ, ಶರಣಪ್ಪ ರೇಚೆಟ್ಟಿ, ಬಸಪ್ಪಣ್ಣ ಬುಡ್ಡೂರ, ಡಿ.ಆರ್. ಚಿದ್ರಿ, ಅರವಿಂದ ಅಗಡಿ, ಬಾಬುರಾವ ಪೋಚಂಪಳ್ಳಿ, ಬಾಬು ಶಂಕರಶೆಟ್ಟಿ, ಬಾಬುರಾವ ಪರಮಶೆಟ್ಟಿ, ಶರಣಪ್ಪ ಗುಡ್ಡಾ, ಡಾ.ಸಿದ್ದು ಪಾಟೀಲ, ವೆಂಕಟರಾವ ಕುಲಕರ್ಣಿ, ಲಕ್ಷ್ಮಣರಾವ ಬುಳ್ಳಾ, ಶಿವರಾಜ ಗಂಗಶೆಟ್ಟಿ ಅಲ್ಲದೇ ಪಟ್ಟಣ ಮತ್ತು ತಾಲ್ಲೂಕಿನ ವಿವಿಧ ಗ್ರಾಮಗಳ ಸಾವಿರಾರು ಸಂಖ್ಯೆಯ ಭಕ್ತಾದಿಗಳು ಉತ್ಸವದಲ್ಲಿ ಭಾಗವಹಿಸಿ, ದೇವರ ಕೃಪಾರ್ಶಿವಾದಕ್ಕೆ ಪಾತ್ರರಾದರು. ಶನಿವಾರ 14ರಿಂದ 27ರವರೆಗೆ ಜಾತ್ರಾ ಉತ್ಸವ ಸಂಬಂಧ ಪ್ರತಿನಿತ್ಯ ಪಲ್ಲಕ್ಕಿ ಉತ್ಸವ ನಡೆಯುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.