ADVERTISEMENT

ಶಿಕ್ಷಣ ಹಕ್ಕು ಅಭಿಯಾನಕ್ಕೆ ಸಹಕಾರ ಬೇಕು

​ಪ್ರಜಾವಾಣಿ ವಾರ್ತೆ
Published 6 ಜುಲೈ 2012, 9:45 IST
Last Updated 6 ಜುಲೈ 2012, 9:45 IST

ಬಸವಕಲ್ಯಾಣ: ಶಿಕ್ಷಣ ಹಕ್ಕು ಅಭಿಯಾನಕ್ಕೆ ಎಲ್ಲರೂ ಸಹಕರಿಸಬೇಕು ಎಂದು ಮುಖ್ಯ ಶಿಕ್ಷಕ ದಿಲೀಪ ಬಿರಾದಾರ ಕೇಳಿಕೊಂಡರು.ಇಲ್ಲಿನ ಸರ್ಕಾರಿ ಮಾದರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಹಮ್ಮಿಕೊಂಡ ಶಾಲೆಗಾಗಿ ನಾವು- ನೀವು ಕಾರ್ಯಕ್ರಮದಲ್ಲಿ ಮಾತನಾಡಿದರು.

ಶಾಲೆಯಲ್ಲಿನ ಸಮಸ್ಯೆಗಳನ್ನು ಶಿಕ್ಷಕರು ಮತ್ತು ಪಾಲಕರು ಜತೆಗೂಡಿ ಪರಿಹರಿಸಬೇಕಾಗಿದೆ. ಜನಪ್ರತಿನಿಧಿಗಳು ಇದಕ್ಕೆ ಸಹಕಾರ ಕೊಡಬೇಕು ಎಂದು ಹೇಳಿದರು.ದಮಯಂತಿ ಮೈಸೆ ಮಾತನಾಡಿ ಸರ್ಕಾರದ ಯೋಜನೆ ಪರಿಣಾಮಕಾರಿಯಾಗಿ ಜಾರಿಯಾದರೆ ಮಾತ್ರ ಶಾಲೆಗಳ ಉದ್ಧಾರ ಸಾಧ್ಯ ಎಂದರು. ಶಾಲೆಗಾಗಿ ನಾವು- ನೀವು ಕಾರ್ಯಕ್ರಮದ ಬಗ್ಗೆ ವಿವರಿಸಿ ಹೇಳಿದರು.

ಎಸ್‌ಡಿಎಂಸಿ ಅಧ್ಯಕ್ಷ ಅಶೋಕ ಪಾಟೀಲ, ನಗರಸಭೆ ಉಪಾಧ್ಯಕ್ಷ ಪಾಶಾಮಿಯ್ಯಾ ಜರಗಾರ, ವೀರಣ್ಣ ಬಿರಾದಾರ, ಕಾಶಿನಾಥ ಭೆಂಡೆ, ಸಂಗೀತಾ ಬಿರಾದಾರ, ಲಕ್ಷ್ಮಿ, ಅಮೀನಾಬೇಗಂ, ಕವಿತಾ, ಶಿಕ್ಷಕರಾದ ಗುಂಡುಪ್ರಸಾದ, ಮಾಣಿಕರಾವ ಲಾಡವಂತಿ, ಈರಮ್ಮ, ಲಲಿತಾ, ಲತಾದೇವಿ, ಶಶಿಕಲಾ, ಶೋಭಾವತಿ  ಉಪಸ್ಥಿತರಿದ್ದರು. ಶಿವಶರಣಪ್ಪ ಮಲ್ಲಾಡೆ ನಿರೂಪಿಸಿದರು. ಭಾಗವತ ಭಾಲ್ಕೆ ವಂದಿಸಿದರು. ಕಾರ್ಯಕ್ರಮದ ಮೊದಲು ಪಟ್ಟಣದ ಮುಖ್ಯ ರಸ್ತೆಯಲ್ಲಿ ಬ್ಯಾನರ್‌ಗಳನ್ನು ಕೈಯಲ್ಲಿ ಹಿಡಿದು ಘೋಷಣೆಗಳನ್ನು ಕೂಗುತ್ತ ಮಕ್ಕಳು ಮೆರವಣಿಗೆ ನಡೆಸಿದರು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.