ADVERTISEMENT

ಸಿದ್ಧಾರೂಢ ಶಾಲೆಗೆ `ಗಿನ್ನಿಸ್ ದಾಖಲೆ' ಪ್ರದಾನ

ಮಕ್ಕಳನ್ನು ರಂಜಿಸಿದ ಮಾಸ್ಟರ್ ಕಿಶನ್

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2013, 8:47 IST
Last Updated 14 ಫೆಬ್ರುವರಿ 2013, 8:47 IST
ಬೀದರ್‌ನಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಕಲಾವಿದ ಮಾಸ್ಟರ್ ಕಿಶನ್ ಸಿದ್ಧಾರೂಢ ಪಬ್ಲಿಕ್ ಶಾಲೆ ಪ್ರಾಚಾರ್ಯ ರತ್ನಾ ಪಾಟೀಲ್ ಅವರಿಗೆ ಮಕ್ಕಳ ಸಾಮೂಹಿಕ ನೃತ್ಯಕ್ಕಾಗಿ ಗಿನ್ನಿಸ್ ದಾಖಲೆ ಪ್ರಶಸ್ತಿ ಪ್ರದಾನ ಮಾಡಿದರು. ಡಾ. ಪಿ.ಸಿ. ಜಾಫರ್, ಶಿವಕುಮಾರ್ ಸ್ವಾಮೀಜಿ, ಶೈಲಜಾ ಶ್ರೀಕಾಂತ್ ಮತ್ತಿತರರು ಇದ್ದರು

ಬೀದರ್: ಹಿಂದೆ ಗುರು, ಮುಂದೆ ಗುರಿ ಇದ್ದರೆ ಜೀವನದಲ್ಲಿ ಏನನ್ನಾದರೂ ಸಾಧಿಸಬಹುದು ಎಂದು ಕಲಾವಿದ ಮಾಸ್ಟರ್ ಕಿಶನ್ ನುಡಿದರು.

ನಗರದ ಸಿದ್ಧಾರೂಢ ಪಬ್ಲಿಕ್ ಸ್ಕೂಲ್‌ನಲ್ಲಿ ಬುಧವಾರ ನಡೆದ `ಗಿನ್ನಿಸ್ ದಾಖಲೆ ಪ್ರಶಸ್ತಿ ಪ್ರದಾನ' ಸಮಾರಂಭದಲ್ಲಿ ಮಾತನಾಡಿದರು.

ನನ್ನ `ಮಾರೊರೆ ಮಾರೊ' ಹಾಡಿನ ಮೇಲೆ ವಿದ್ಯಾರ್ಥಿಗಳು ಪ್ರದರ್ಶಿಸಿದ ಸಾಮೂಹಿಕ ನೃತ್ಯ ಗಿನ್ನಿಸ್ ದಾಖಲೆ ಸೇರಿದೆ. ಇದರ ಶ್ರೇಯ ಎಲ್ಲರಿಗೂ ಸಲ್ಲಿಸುತ್ತದೆ ಎಂದರು.

ಒಟ್ಟಾರೆ 15,121 ಮಕ್ಕಳು ಏಕಕಾಲಕ್ಕೆ ಸಾಮೂಹಿಕ ನೃತ್ಯ ಮಾಡುವ ಮೂಲಕ ಇಂಥದ್ದೊಂದು ದಾಖಲೆಗೆ ಕಾರಣರಾಗಿದ್ದಾರೆ. ಸಿದ್ಧಾರೂಢ ಪಬ್ಲಿಕ್ ಶಾಲೆಯ 1,120 ಮಕ್ಕಳು ಈ ನೃತ್ಯದಲ್ಲಿ ಭಾಗಿ ಆಗಿರುವುದು ಗಮನಾರ್ಹ ಎಂದು ಹೇಳಿದರು.

ಶಾಲೆಗೆ ಗಿನ್ನಿಸ್ ದಾಖಲೆ ಪ್ರಶಸ್ತಿ ಪ್ರದಾನ ಮಾಡಿದರು. ಗಾಯನದ ಮೂಲಕ ಮಕ್ಕಳನ್ನು ರಂಜಿಸಿದರು.

ಮಾಸ್ಟರ್ ಕಿಶನ್ ತಾಯಿ ಶೈಲಜಾ ಶ್ರೀಕಾಂತ್, ಜಿಲ್ಲಾಧಿಕಾರಿ ಡಾ. ಪಿ.ಸಿ. ಜಾಫರ್, ಚಿದಂಬರ ಶಿಕ್ಷಣ ಸಂಸ್ಥೆ ಅಧ್ಯಕ್ಷ ಶಿವಕುಮಾರ್ ಸ್ವಾಮೀಜಿ, ಪ್ರಾಚಾರ್ಯ ರತ್ನಾ ಪಾಟೀಲ್, ಪ್ರಮುಖರಾದ ಬಸವರಾಜ ಜಾಬಶೆಟ್ಟಿ, ಶಿವರಾಜ ಶೆಟಕಾರ್ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.