ADVERTISEMENT

100 ರೋಗಿಗಳಿಗೆ ಕನ್ನಡಕ, ಔಷಧಿ ವಿತರಣೆ

​ಪ್ರಜಾವಾಣಿ ವಾರ್ತೆ
Published 2 ಜೂನ್ 2011, 6:35 IST
Last Updated 2 ಜೂನ್ 2011, 6:35 IST
100 ರೋಗಿಗಳಿಗೆ ಕನ್ನಡಕ, ಔಷಧಿ ವಿತರಣೆ
100 ರೋಗಿಗಳಿಗೆ ಕನ್ನಡಕ, ಔಷಧಿ ವಿತರಣೆ   

ಬೀದರ್: ನೇತ್ರ ಶಸ್ತ್ರಚಿಕಿತ್ಸೆಗೆ ಒಳಗಾದ 100 ಜನ ರೋಗಿಗಳಿಗೆ ನಗರದ ಡಾ. ಸಾಲಿನ್ಸ್ ಆಸ್ಪತ್ರೆಯಲ್ಲಿ ಬುಧವಾರ ಉಚಿತ ಕನ್ನಡ ಹಾಗೂ ಔಷಧಿ ವಿತರಿಸಲಾಯಿತು.

ವೆಲ್‌ಮೆಗ್ನಾ ಗುಡ್ ನ್ಯೂಸ್ ಸಂಸ್ಥೆ ಹಾಗೂ ಜರ್ಮನಿಯ ಹಮಾರಾ ಬಂಧನ್ ಸ್ವಯಂ ಸೇವಾ ಸಂಸ್ಥೆಯ ಸಹಯೋಗದೊಂದಿಗೆ ಜಿಲ್ಲೆಯ ಚಾಂಗಲೇರಾ, ಹಲಬರ್ಗಾ ಮತ್ತು ಜನವಾಡದಲ್ಲಿ ಮೇ ತಿಂಗಳಲ್ಲಿ ಒಟ್ಟು 500 ಜನರ ಉಚಿತ ನೇತ್ರ ತಪಾಸಣೆ ನಡೆಸಲಾಗಿತ್ತು. ಈ ಪೈಕಿ 100 ಜನರಿಗೆ ಉಚಿತ ಶಸ್ತ್ರಚಿಕಿತ್ಸೆ ನಡೆಸಲಾಗಿದ್ದು, ಬುಧವಾರ ಅವರನ್ನು ಬೀಳ್ಕೊಡಲಾಯಿತು.

ಅಂಧರ ನೋವು ಮತ್ತು ದುಃಖ ಅರಿತರೆ ಕಣ್ಣಿನ ಮಹತ್ವ ಗೊತ್ತಾಗುತ್ತದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಮಾರ್ಥಂಡ್ ಕಾಶೆಂಪೂರಕರ್ ಅಭಿಪ್ರಾಯಪಟ್ಟರು.

ಬೇರೆ ಯಾವುದೇ ಅಂಗವೈಕಲ್ಯ ಇದ್ದರೂ ಬದುಕಬಹುದು. ಆದರೆ, ಕಣ್ಣು ಇಲ್ಲದವರ ಜೀವನ ತೀರಾ ಕಷ್ಟಕರ. ಕಣ್ಣಿನಿಂದ ಜಗತ್ತು ನೋಡುವುದಕ್ಕಿಂತ ದೊಡ್ಡ ಸಂಪತ್ತು ಮತ್ತೊಂದಿಲ್ಲ ಎಂದು ಹೇಳಿದರು.

ಕಣ್ಣು ದೇವರ ಕೊಟ್ಟಿರುವ ಅಮೂಲ್ಯ ಕೊಡುಗೆ. ಆದ್ದರಿಂದ ಎಲ್ಲರು ಕಣ್ಣುಗಳನ್ನು ರಕ್ಷಣೆಗೆ ಆದ್ಯತೆ ಕೊಡಬೇಕು ಎಂದು ಶಾಹೀನ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಅಬ್ದುಲ್ ಖದೀರ್ ತಿಳಿಸಿದರು.

ಡಾ. ಸಿಬಿಲ್ ಶಸ್ತ್ರಚಿಕಿತ್ಸೆಯ ಮೂಲಕ ಜಿಲ್ಲೆಯಲ್ಲಿ ಸಾವಿರಾರು ಜನರಿಗೆ ಹೊಸ ಬೆಳಕು ನೀಡಿದ್ದಾರೆ.  ನೇತ್ರ ಶಸ್ತ್ರಚಿಕಿತ್ಸೆ ಹಾಗೂ ಕುಷ್ಠರೋಗಿಗಳಿಗೆ ನೆರವು ಒದಗಿಸುತ್ತಿರುವ ವೆಲ್‌ಮೆಗ್ನಾ ಸಂಸ್ಥೆಯ ಕಾರ್ಯ ಶ್ಲಾಘನೀಯ ಎಂದು ಹೇಳಿದರು.

ನಗರಸಭೆ ಸದಸ್ಯ ಫಿಲೋಮಿನ್ ರಾಜ ಪ್ರಸಾದ ಇದ್ದರು. ಜರ್ಮನಿಯ ಹಮಾರಾ ಬಂಧನ್ ಸಹಯೋಗದೊಂದಿಗೆ ಇನ್ನು ಮುಂದೆ ವರ್ಷಕ್ಕೆ ಮೂರು ಶಿಬಿರ ನಡೆಸಲಾಗುತ್ತದೆ ಎಂದು ಡಾ. ಸಿಬಿಲ್ ಮೆಶ್ರಾಂಕರ್ ಹೇಳಿದರು. ಶಸ್ತ್ರಚಿಕಿತ್ಸೆಗೆ ಒಳಗಾದವರು ಸೂಚನೆಗಳನ್ನು ಚಾಚು ತಪ್ಪದೇ ಪಾಲಿಸಬೇಕು ಎಂದು ಸಲಹೆ ಮಾಡಿದರು.

ಜಿಲ್ಲಾ ಅಂಧತ್ವ ನಿವಾರಣೆ ಸಂಸ್ಥೆಯ ಕಾರ್ಯದರ್ಶಿ ಡಾ. ನಾಗಭೂಷಣ ಸುಲಗುಂಟೆ, ತರಬೇತಿ ಅಧಿಕಾರಿ ವೀರೇಂದ್ರ ಉಪಸ್ಥಿತರಿದ್ದರು.  ಕೆಕ್ ಕತ್ತರಿಸಿ ವೆಲ್‌ಮೆಗ್ನಾ ಗುಡ್ ನ್ಯೂಸ್ ಸಂಸ್ಥೆಯ 43ನೇ ಸಂಸ್ಥಾಪನಾ ದಿನ ಆಚರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.