ADVERTISEMENT

ಬೀದರ್: ಗುರುನಾನಕ ಪಬ್ಲಿಕ್ ಶಾಲೆಗೆ ಪ್ರತಿಶತ ಫಲಿತಾಂಶ; ನರೇಶ ಪ್ರಥಮ

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2021, 14:55 IST
Last Updated 3 ಆಗಸ್ಟ್ 2021, 14:55 IST
ನರೇಶ (ಶೇ 95.8)
ನರೇಶ (ಶೇ 95.8)   

ಬೀದರ್: ಇಲ್ಲಿಯ ಗುರುನಾನಕ ಪಬ್ಲಿಕ್ ಶಾಲೆಯು ಪ್ರಸಕ್ತ ವರ್ಷದ ಸಿಬಿಎಸ್‍ಇ 10ನೇ ಪರೀಕ್ಷೆಯಲ್ಲಿ ಶೇ 100ಕ್ಕೆ 100 ರಷ್ಟು ಫಲಿತಾಂಶ ಗಳಿಸಿದೆ.

ಪರೀಕ್ಷೆಗೆ ಹಾಜರಾಗಿದ್ದ ಎಲ್ಲ 239 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. 147 ಅಗ್ರಶ್ರೇಣಿ, 90 ಪ್ರಥಮ ದರ್ಜೆ ಹಾಗೂ ಇಬ್ಬರು ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ತೇರ್ಗಡೆಯಾಗಿದ್ದಾರೆ.

ನರೇಶ (ಶೇ 95.8), ಭೂಮಿಕಾ (ಶೇ 95.4), ಶ್ರೀನಿಧಿ ಪಾಟೀಲ (ಶೇ 94.2), ದಿಯಾ ಸಿ. (ಶೇ 94.2), ಪ್ರಿಯಾ (ಶೇ 94.2), ವೇದಾಂತ (ಶೇ 94), ವಿನಯ್ ಘಾಳೆ (ಶೇ 94), ಎಂ.ಡಿ. ಝಯಾನ್ (ಶೇ 93.4), ಆದಿತ್ಯ ಕುಲಕರ್ಣಿ (ಶೇ 92.8), ಶುಭಾಂಗ ಪಾಟೀಲ (ಶೇ 92.8), ಬಸವೇಶ (ಶೇ 91.6), ಸೈಯದ್ ಇರ್ಫಾನ್ (ಶೇ 91.4), ಯಶಸ್ವಿನಿ ಚಲ್ವಾ (ಶೇ 91.4), ಅಪೂರ್ವ (ಶೇ 91.2), ವೈಭವಿ (ಶೇ 91.2), ಎಂ.ಡಿ. ಅಶ್ರಫ್ (ಶೇ 90.8), ಎಸ್.ಆರ್. ಸ್ಪೂರ್ತಿ (ಶೇ 90.8), ಎಂ.ಡಿ. ಮುಜತಬುದ್ದಿನ್ (ಶೇ 90.8), ಪೂಜಾ (ಶೇ 90.6), ರಿಷಿಕೇಶ್ ಜಿ. (ಶೇ 90.2), ಸಫಾ ಸಮೀನ್ (ಶೇ 90) ಅಂಕ ಪಡೆದು ಸಾಧನೆ ಮೆರೆದಿದ್ದಾರೆ.

ADVERTISEMENT

ಗುಣಮಟ್ಟದ ಶಿಕ್ಷಣದಿಂದಾಗಿ ಶಾಲೆ ಪ್ರತಿ ವರ್ಷ ಅತ್ಯುತ್ತಮ ಫಲಿತಾಂಶ ಪಡೆಯುತ್ತಿದೆ. ಈ ಬಾರಿ ಅತಿಹೆಚ್ಚು ವಿದ್ಯಾರ್ಥಿಗಳು ಅಗ್ರಶ್ರೇಣಿ ಹಾಗೂ ಪ್ರಥಮ ದರ್ಜೆಯಲ್ಲಿ ಪಾಸಾಗಿದ್ದಾರೆ ಎಂದು ಗುರುನಾನಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಸರ್ದಾರ್ ಬಲಬೀರ್ ಸಿಂಗ್, ಉಪಾಧ್ಯಕ್ಷೆ ರೇಷ್ಮಾ ಕೌರ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.