ಬೀದರ್: ‘ಜಿಲ್ಲೆಯಲ್ಲಿ 100 ಜನ ಕುಷ್ಠರೋಗಿಗಳಿದ್ದಾರೆ. ಅವರಿಗೆ ಉತ್ತಮ ಉಪಚಾರ ಮಾಡಲಾಗುತ್ತಿದೆ’ ಎಂದು ಜಿಲ್ಲಾ ಕುಷ್ಠರೋಗ ಅಧಿಕಾರಿ ಡಾ.ಕಿರಣ ಪಾಟೀಲ ಹೇಳಿದರು.
ಜಿಲ್ಲಾ ಕುಷ್ಠರೋಗ ಅಧಿಕಾರಿಗಳ ಕಚೇರಿ, ಆರೋಗ್ಯ ಮಾತಾ ಸೇವಾ ಕೇಂದ್ರದ ಸಹಯೋಗದಲ್ಲಿ ನಗರದಲ್ಲಿ ಗುರುವಾರ ಏರ್ಪಡಿಸಿದ್ದ ಕುಷ್ಠರೋಗ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕುಷ್ಠರೋಗವು ಒಂದು ಸಾಂಕ್ರಮಿಕ ರೋಗವಾಗಿದೆ. ಇದು ಮುಖ್ಯವಾಗಿ ಚರ್ಮ ಹಾಗೂ ನರಕ್ಕೆ ಸಂಬಂಧಿಸಿದೆ. ದೇಹದ ಮೇಲೆ ಸ್ಪರ್ಶ ಜ್ಞಾನವಿಲ್ಲದ ಯಾವುದೇ ತರಹದ ಮಚ್ಚೆಗಳು ಇದ್ದಲ್ಲಿ ತಮ್ಮ ಸಮೀಪದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಚಿಕಿತ್ಸೆ ಪಡೆಯಬಹುದು. ಹೆದರುವ ಅಗತ್ಯವಿಲ್ಲ ಎಂದು ಹೇಳಿದರು.
ಕುಷ್ಠರೋಗಿಗಳನ್ನು ಕಂಡರೆ ದೂರ ಸರಿಯುತ್ತಾರೆ. ಆದರೆ, ಮಾತಾ ಸೇವಾ ಕೇಂದ್ರದವರು ಮಕ್ಕಳಂತೆ ಅವರನ್ನು ನೋಡಿಕೊಳ್ಳುತ್ತಿದ್ದಾರೆ, ಉಪಚರಿಸುತ್ತಿದ್ದಾರೆ ಎಂದು ಮೆಚ್ಚುಗೆ ಸೂಚಿಸಿದರು.
ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ವೀರಶೆಟ್ಟಿ ಚನ್ನಶೆಟ್ಟಿ ಮಾತನಾಡಿ, ಮೊದಲ ಹಂತದಲ್ಲಿ ಚಿಕಿತ್ಸೆ ಪಡೆದರೆ ಕುಷ್ಠರೋಗದಿಂದ ಅಂಗವೈಕಲ್ಯಕ್ಕೆ ಒಳಗಾಗುವುದನ್ನು ತಡೆಯಬಹುದು. ಎಲ್ಲರೂ ಕೈಜೋಡಿಸಿದಾಗ ಕುಷ್ಠರೋಗ ಮುಕ್ತ ಜಿಲ್ಲೆ ಮಾಡಬಹುದು ಎಂದರು.
ಸಿಸ್ಟರ್ ರೋಸಿ ಕ್ಯೂಟಿನಾ, ಫಾದರ್ ಎನ್. ಡಿಸೋಜ, ಫಾದರ್ ಕ್ಲಾಯರಿ ಡಿಸೋಜ, ಡಾ.ಸಂತೋಷ ಲೋಕೆರಿ, ಡಾ. ಶಿವರಾಜ ಪಾಟೀಲ, ಡಾ. ಶಿವಲೀಲಾ, ಡಾ.ಸುಮ್ಮಿ, ಸಿಸ್ಟರ್ ಸ್ಯಾಲಿಸ್ಟನ್, ಸುದರ್ಶನ ಪಾಲ್, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಯೋಹಾನ, ಪ್ರಭಾವತಿ, ಸಂಗೀತಾ, ಇಮ್ಯಾನುವೆಲ್, ವಿನೋದ ಕುಮಾರ, ಶಂಕರ ಬಿರಾದಾರ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.