ADVERTISEMENT

1,511 ಅಡಿಯ ತ್ರಿವರ್ಣ ಧ್ವಜ ಯಾತ್ರೆ

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2019, 15:35 IST
Last Updated 13 ಆಗಸ್ಟ್ 2019, 15:35 IST
ಬೀದರ್‌ನಲ್ಲಿ ಮಂಗಳವಾರ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಯುವ ಬಳಗದ ವತಿಯಿಂದ 73ನೆಯ ಸ್ವಾತಂತ್ರ್ಯೋತ್ಸವ ಹಾಗೂ 221ನೆಯ ಸಂಗೊಳ್ಳಿ ರಾಯಣ್ಣ ಜಯಂತಿ ಪ್ರಯುಕ್ತ 1,511 ಅಡಿ ಉದ್ದದ ತ್ರಿವರ್ಣ ಧ್ವಜದ ಯಾತ್ರೆ ನಡೆಯಿತು
ಬೀದರ್‌ನಲ್ಲಿ ಮಂಗಳವಾರ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಯುವ ಬಳಗದ ವತಿಯಿಂದ 73ನೆಯ ಸ್ವಾತಂತ್ರ್ಯೋತ್ಸವ ಹಾಗೂ 221ನೆಯ ಸಂಗೊಳ್ಳಿ ರಾಯಣ್ಣ ಜಯಂತಿ ಪ್ರಯುಕ್ತ 1,511 ಅಡಿ ಉದ್ದದ ತ್ರಿವರ್ಣ ಧ್ವಜದ ಯಾತ್ರೆ ನಡೆಯಿತು   

ಬೀದರ್: ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಯುವ ಬಳಗದ ವತಿಯಿಂದ 73ನೆಯ ಸ್ವಾತಂತ್ರ್ಯೋತ್ಸವ ಹಾಗೂ 221ನೆಯ ಸಂಗೊಳ್ಳಿ ರಾಯಣ್ಣ ಜಯಂತಿ ಅಂಗವಾಗಿ ನಗರದಲ್ಲಿ ಮಂಗಳವಾರ 1,511 ಅಡಿ ಉದ್ದದ ತ್ರಿವರ್ಣ ಧ್ವಜದ ಯಾತ್ರೆ ನಡೆಯಿತು.

ನಗರದ ಬೊಮ್ಮಗೊಂಡೇಶ್ವರ ವೃತ್ತದಲ್ಲಿ ಶಾಸಕ ಬಂಡೆಪ್ಪ ಕಾಶೆಂಪೂರ ಯಾತ್ರೆಗೆ ಚಾಲನೆ ನೀಡಿದರು.

ಅಲ್ಲಿಂದ ಯಾತ್ರೆಯು ಭಗತ್ ಸಿಂಗ್ ವೃತ್ತ, ಅಂಬೇಡ್ಕರ್ ವೃತ್ತ, ಹರಳಯ್ಯ ವೃತ್ತ, ಕನ್ನಡಾಂಬೆ ವೃತ್ತದ ಮೂಲಕ ಹಾಯ್ದು ಸಾಯಿ ಆದರ್ಶ ಪ್ರೌಢಶಾಲೆ ಆವರಣ ತಲುಪಿ ಸಮಾರೋಪಗೊಂಡಿತು.

ADVERTISEMENT

ಮುಖಂಡ ನಿಕಿತರಾಜ ಮೌರ್ಯ ಮಾತನಾಡಿ,‘ ಸಂಗೊಳ್ಳಿ ರಾಯಣ್ಣ ಅಪ್ರತಿಮ ದೇಶಭಕ್ತರಾಗಿದ್ದರು. ಪ್ರತಿಯೊಬ್ಬರು ರಾಯಣ್ಣನವರ ರಾಷ್ಟ್ರ ಭಕ್ತಿಯನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು’ ಎಂದು ಹೇಳಿದರು.

‘ಸಂಗೊಳ್ಳಿ ರಾಯಣ್ಣ ಸ್ವಾತಂತ್ರ್ಯೋತ್ಸವದ ದಿನ ಜನಿಸಿದ್ದು, ಗಣರಾಜ್ಯೋತ್ಸವ ದಿನ ವೀರ ಮರಣ ಹೊಂದಿದ್ದಾರೆ’ ತಿಳಿಸಿದರು.

ಜಿಲ್ಲಾ ಪಂಚಾಯಿತಿ ಸದಸ್ಯ ಬಾಬುರಾವ್ ಮಲ್ಕಾಪುರೆ, ನಗರಸಭೆ ಸದಸ್ಯ ರಾಜಾರಾಮ ಚಿಟ್ಟಾ, ಕರವೇ ಯುವ ಸೇನೆ ರಾಜ್ಯ ಘಟಕದ ಅಧ್ಯಕ್ಷ ಹರೀಶ, ಮುಖಂಡರಾದ ಅಭಿಷೇಕ ಶಿವಣ್ಣ, ಮಾಳಪ್ಪ ಅಡಸಾರೆ, ಮನ್ನಾನ್ ಸೇಠ್, ದೇವೇಂದ್ರ ಸೋನಿ, ಸಂಘದ ಅಧ್ಯಕ್ಷ ಗೋಪಿ ಎಖ್ಖೆಳ್ಳಿಕರ್, ಕೆ.ಡಿ. ಗಣೇಶ, ಸಂತೋಷ ಜೋಳದಾಪಕೆ, ಅನಿಲ ಹೂಗೇರಿ, ಸುರೇಶ ಹೂಗೇರಿ, ಬೊಮ್ಮಗೊಂಡ ಚಿಟ್ಟಾವಾಡಿ, ದೀಪಕ ಚಿದ್ರಿ, ಅನಿಲ ಚಿಲ್ಲರ್ಗಿ, ಪ್ರಸಾದ ಪಾಟೀಲ ಚಿಮಕೋಡ, ವಿಶಾಲ ಹೊನ್ನಾ ಕಮಠಾಣ, ಆನಂದ ಕಮಠಾಣ, ವಿನೀತ ಗಿರಿ ಚಿದ್ರಿ, ರವಿ ಕೋಡಗೆ, ಸೂರಜ್ ಚಿದ್ರಿ, ಗುರು ಪ್ರಶಾಂತ, ಶಿವಶರಣಪ್ಪ ಪಾಟೀಲ ಚಿಮಕೋಡ, ಸುಭಾಷ ನಾಗೂರೆ, ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಕಂಟೆಪ್ಪ ಸ್ವಾಗತಿಸಿದರು. ಮಾಳಿಂಗರಾಯ ನಿರೂಪಿಸಿದರು. ಸಂತೋಷ ಜೋಳದಾಪಕೆ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.