ADVERTISEMENT

26ರಂದು ಅಂಬೇಡ್ಕರ, ಬುದ್ಧ ಪ್ರತಿಮೆ ಅನಾವರಣ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2012, 8:20 IST
Last Updated 23 ಏಪ್ರಿಲ್ 2012, 8:20 IST
26ರಂದು ಅಂಬೇಡ್ಕರ, ಬುದ್ಧ ಪ್ರತಿಮೆ ಅನಾವರಣ
26ರಂದು ಅಂಬೇಡ್ಕರ, ಬುದ್ಧ ಪ್ರತಿಮೆ ಅನಾವರಣ   

ಬಸವಕಲ್ಯಾಣ: ತಾಲ್ಲೂಕಿನ ಗಡಿಗೌಡಗಾಂವದಲ್ಲಿ ಏಪ್ರಿಲ್ 26 ರಂದು ಸಂವಿಧಾನ ಶಿಲ್ಪಿ, ಭಾರತರತ್ನ ಡಾ.ಬಾಬಾಸಾಹೇಬ್ ಅಂಬೇಡ್ಕರ ಅವರ ಮತ್ತು ತಥಾಗತ ಗೌತಮ ಬುದ್ಧನ ಪ್ರತಿಮೆ ಅನಾವರಣ ಮತ್ತು ಅಂಬೇಡ್ಕರ ಭವನದ ಅಡಿಗಲ್ಲು ಕಾರ್ಯಕ್ರಮ ನಡೆಯಲಿದೆ.

ಅಂದು ಮಧ್ಯಾಹ್ನ 12 ಗಂಟೆಗೆ ರಾಜ್ಯದ ಮುಖ್ಯಮಂತ್ರಿ ಸದಾನಂದಗೌಡ ಅವರು ಅಂಬೇಡ್ಕರ ಪ್ರತಿಮೆ ಅನಾವರಣಗೊಳಿಸಿ ಭವನಕ್ಕೆ ಶಂಕುಸ್ಥಾಪನೆ ನೆರವೇರಿಸುವರು. ಡಾ.ಅಂಬೇಡ್ಕರರ ಮೊಮ್ಮಗ ಪ್ರಕಾಶ ಅಂಬೇಡ್ಕರ ಅವರು ಬುದ್ಧನ ಪ್ರತಿಮೆಯನ್ನು ಅನಾವರಣ ಮಾಡುವರು. ಅಂಬೇಡ್ಕರ ಪ್ರಶಸ್ತಿ ಪುರಸ್ಕೃತರಾದ ಹಿರಿಯ ಮುಖಂಡ ತಾತೇರಾವ ಕಾಂಬಳೆ ಅಧ್ಯಕ್ಷತೆ ವಹಿಸುವರು.

ಬೌದ್ಧ ಧರ್ಮಗುರುಗಳಾದ ಖೇಮಾಚಾರ್ಯ ಥೇರೋ ಸಿದ್ಧಾರ್ಥ ಟ್ರಸ್ಟ್ ಸಿಕಂದ್ರಾಬಾದ್, ಸಂಘರಕ್ಷಿತಾ ಮಹಾಥೇರೋ ಆನಂದ ಬುದ್ಧವಿಹಾರ, ಬಧಂತ ಧಮ್ಮಾನಂದ ಅಣದೂರ, ಬಧಂತ ನವಪಾಲ ಹುಲಸೂರ, ಭದಂತ ಸಂಘಾನಂದ ಗಡವಂತಿ, ಬಧಂತ ಶಿವಲಿ ಕರುಣಾ ಭಾಲ್ಕಿ ಸಾನಿಧ್ಯ ವಹಿಸುವರು.

ಹಾರಕೂಡ ಚೆನ್ನವೀರ ಶಿವಾಚಾರ್ಯರು, ಹುಲಸೂರ ಶಿವಾನಂದ ಸ್ವಾಮೀಜಿ, ಬಸವಶ್ರೀ ಬೆಲ್ದಾಳ್ ಸಿದ್ಧರಾಮ ಶರಣರು, ತಡೋಳಾ ರಾಜೇಶ್ವರ ಶಿವಾಚಾರ್ಯರು, ಬೇಲೂರ ಪಂಚಾಕ್ಷರಿ ಉರಿಲಿಂಗಪೆದ್ದಿ ಸ್ವಾಮೀಜಿ, ರೆಡ್ಡಿ ಗುರೂಜಿ ರೇಕುಳಗಿ, ಗಡಿಗೌಡಗಾಂವ ಶಾಂತವೀರ ಶಿವಾಚಾರ್ಯರು ನೇತೃತ್ವ ವಹಿಸುವರು.

ಸಂಸದ ಎನ್.ಧರ್ಮಸಿಂಗ್, ಕೇಂದ್ರ ಕಾರ್ಮಿಕ ಸಚಿವ ಮಲ್ಲಿಕಾರ್ಜುನ ಖರ್ಗೆ, ಬಿಜೆಪಿ ರಾಜ್ಯಾಧ್ಯಕ್ಷ ಕೆ.ಎಸ್.ಈಶ್ವರಪ್ಪ, ಲೋಕೋಪಯೋಗಿ ಇಲಾಖೆ ಸಚಿವ ಸಿ.ಎಂ.ಉದಾಸಿ, ಗೃಹ ಮಂಡಳಿ ಸಚಿವ ವಿ.ಸೋಮಣ್ಣ, ಗ್ರಾಮೀಣಾಭಿವೃದ್ಧಿ ಸಚಿವ ಜಗದೀಶ ಶೆಟ್ಟರ್, ಪಶು ಸಂಗೋಪನಾ ಸಚಿವ ರೇವುನಾಯಕ್ ಬೆಳಮಗಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಗೋವಿಂದ ಕಾರಜೋಳ, ಸಮಾಜ ಕಲ್ಯಾಣ ಇಲಾಖೆ ಸಚಿವ ನಾರಾಯಣಸ್ವಾಮಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.

ಮಾಜಿ ಸಚಿವ ಭೀಮಣ್ಣ ಖಂಡ್ರೆ, ಗುರುಪಾದಪ್ಪ ನಾಗಮಾರಪಳ್ಳಿ, ಬಸವರಾಜ ಪಾಟೀಲ ಹುಮನಾಬಾದ್, ವಿಧಾನಪರಿಷತ್ ಸದಸ್ಯ ಖಾಜಿ ಅರ್ಷದ್ ಅಲಿ, ಕುರುಬರ ಸಂಘದ ಅಧ್ಯಕ್ಷ ರಘುನಾಥ ಮಲ್ಕಾಪುರೆ, ಶಾಸಕ ಬಸವರಾಜ ಪಾಟೀಲ ಅಟ್ಟೂರ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬಾಬುರಾವ ಕಾರಬಾರಿ, ಶಾಸಕರಾದ ಬಂಡೆಪ್ಪ ಕಾಶೆಂಪುರ, ಈಶ್ವರ ಖಂಡ್ರೆ, ರಾಜಶೇಖರ ಪಾಟೀಲ ಹುಮನಾಬಾದ್, ರಹೀಮಖಾನ್ ಬೀದರ್, ಪ್ರಭು ಚವ್ಹಾಣ ಔರಾದ್, ದಲಿತ ಮುಖಂಡ ಶಿವರಾಮ ಮೋಘಾ, ವಿಠ್ಠಲ ದೊಡ್ಮನಿ ಮುಂತಾದವರು ಅತಿಥಿಗಳಾಗಿ ಪಾಲ್ಗೊಳ್ಳುವರು. ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ 85 ಜನರನ್ನು ಈ ಸಂದರ್ಭದಲ್ಲಿ ಸತ್ಕರಿಸಲಾಗುತ್ತದೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.