ADVERTISEMENT

ಸಿಡಿಲು ಬಡಿದು ಸಾವು: ₹5 ಲಕ್ಷ ಪರಿಹಾರ ವಿತರಣೆ

​ಪ್ರಜಾವಾಣಿ ವಾರ್ತೆ
Published 1 ಜುಲೈ 2021, 4:20 IST
Last Updated 1 ಜುಲೈ 2021, 4:20 IST
ಬೀದರ್ ತಾಲ್ಲೂಕಿನ ಕಾಶೆಂಪೂರ್(ಪಿ) ಗ್ರಾಮದಲ್ಲಿ ಸಿಡಿಲು ಬಡಿದು ಮೃತಪಟ್ಟ ಚಿದಾನಂದ ಅವರ ಪತ್ನಿಗೆ ಶಾಸಕ ಬಂಡೆಪ್ಪ ಕಾಶೆಂಪೂರ್ ಅವರು ಸರ್ಕಾರದಿಂದ ಮಂಜೂರಾದ ₹5 ಲಕ್ಷದ ಚೆಕ್ ವಿತರಿಸಿದರು
ಬೀದರ್ ತಾಲ್ಲೂಕಿನ ಕಾಶೆಂಪೂರ್(ಪಿ) ಗ್ರಾಮದಲ್ಲಿ ಸಿಡಿಲು ಬಡಿದು ಮೃತಪಟ್ಟ ಚಿದಾನಂದ ಅವರ ಪತ್ನಿಗೆ ಶಾಸಕ ಬಂಡೆಪ್ಪ ಕಾಶೆಂಪೂರ್ ಅವರು ಸರ್ಕಾರದಿಂದ ಮಂಜೂರಾದ ₹5 ಲಕ್ಷದ ಚೆಕ್ ವಿತರಿಸಿದರು   

ಜನವಾಡ: ಸಿಡಿಲು ಬಡಿದು ಮೃತಪಟ್ಟ ಬೀದರ್ ತಾಲ್ಲೂಕಿನ ಕಾಶೆಂಪೂರ (ಪಿ) ಗ್ರಾಮದ ಚಿದಾನಂದ ಅವರ ಕುಟುಂಬಕ್ಕೆ ಸರ್ಕಾರದಿಂದ ಮಂಜೂರಾದ ₹5 ಲಕ್ಷದ ಚೆಕ್‍ನ್ನು ಶಾಸಕ ಬಂಡೆಪ್ಪ ಕಾಶೆಂಪೂರ್ ಗ್ರಾಮದಲ್ಲಿ ಬುಧವಾರ ವಿತರಿಸಿದರು.

‘ಮೃತರ ಪತ್ನಿಗೆ ವಿಧವಾ ವೇತನ ಮಂಜೂರು ಮಾಡಬೇಕು. ರಾಷ್ಟ್ರೀಯ ಭದ್ರತಾ ಯೋಜನೆ ಪರಿಹಾರ ಹಾಗೂ ಶವ ಸಂಸ್ಕಾರ ಹಣ ಬೇಗ ದೊರಕಿಸಿಕೊಡಬೇಕು’ ಎಂದು ಅಧಿಕಾರಿಗಳಿಗೆ ಸೂಚಿಸಿದರು.

‘ಅರ್ಹರಿಗೆ ವೃದ್ಧಾಪ್ಯ ವೇತನ, ವಿಧವಾ ವೇತನ ಮಂಜೂರು ಮಾಡಬೇಕು. ಸರ್ಕಾರದ ಯೋಜನೆಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು’ ಎಂದು ಹೇಳಿದರು.

ADVERTISEMENT

ತಹಶೀಲ್ದಾರ್ ಗಂಗಾದೇವಿ, ಗ್ರಾಮ ಪಂಚಾಯಿತಿ ಸದಸ್ಯರಾದ ಬಜರಂಗ ತಮಗೊಂಡ, ಶಿವಕುಮಾರ, ಮಂಜುನಾಥ, ಮೋಹನ್ ಸಾಗರ, ನರಸಪ್ಪ ಬಜಗೊಂಡ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.