ಬೀದರ್: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ನೌಬಾದ್‍ನ ಆಟೊನಗರ ಹಿಂದುಗಡೆ ಚೌಳಿ ರಸ್ತೆಯಲ್ಲಿ ನಿರ್ಮಿಸುತ್ತಿರುವ ವಿಶ್ವಕರ್ಮ ಸಮುದಾಯ ಭವನಕ್ಕೆ ₹ 5 ಲಕ್ಷ ಅನುದಾನ ಮಂಜೂರು ಮಾಡಿದೆ.
ನಗರದಲ್ಲಿ ಶಾಸಕ ಬಂಡೆಪ್ಪ ಕಾಶೆಂಪೂರ್ ಅವರು ಶ್ರೀ ವಿಶ್ವಕರ್ಮ ಧರ್ಮವರ್ಧಿನಿ ಸಂಘದ ಅಧ್ಯಕ್ಷ ಶ್ರೀನಿವಾಸ ವಿಶ್ವಕರ್ಮ ಅವರಿಗೆ ಅನುದಾನ ಮಂಜೂರಾತಿ ಪತ್ರ ವಿತರಿಸಿದರು.
ಯೋಜನೆಯ ಕಲಬುರ್ಗಿ ಪ್ರಾದೇಶಿಕ ನಿರ್ದೇಶಕ ಉಮಾರಾವ್, ಬೀದರ್ ತಾಲ್ಲೂಕು ಯೋಜನಾಧಿಕಾರಿ ರಮೇಶ, ರಮೇಶ ಸೋನಾರ್, ಸುಭಾಷ, ಬಲಭೀಮರಾವ್, ಡಿ.ಬಿ. ಕುಂಬಾರ, ಪಾಂಡುರಂಗ ವಿಶ್ವಕರ್ಮ, ರಘುನಾಥರಾವ್ ವಿಶ್ವಕರ್ಮ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.