ADVERTISEMENT

ಗೋದಲಿ ಹಾಡುಗಳೊಂದಿಗೆ ಕ್ರೈಸ್ತರ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2021, 14:00 IST
Last Updated 19 ಡಿಸೆಂಬರ್ 2021, 14:00 IST
ಬೀದರ್‌ನ ಮೈಲೂರ್ ಕ್ರಾಸ್‌ನಲ್ಲಿರುವ ಜಮಗಿ ಕಾಲೊನಿಯಲ್ಲಿ ಭಾನುವಾರ ಬಾಲ ಯೇಸುವಿನ ಪ್ರತಿಕೃತಿಯೊಂದಿಗೆ ಮೆರವಣಿಗೆಯಲ್ಲಿ ಬಂದ ಕ್ರೈಸ್ತರು
ಬೀದರ್‌ನ ಮೈಲೂರ್ ಕ್ರಾಸ್‌ನಲ್ಲಿರುವ ಜಮಗಿ ಕಾಲೊನಿಯಲ್ಲಿ ಭಾನುವಾರ ಬಾಲ ಯೇಸುವಿನ ಪ್ರತಿಕೃತಿಯೊಂದಿಗೆ ಮೆರವಣಿಗೆಯಲ್ಲಿ ಬಂದ ಕ್ರೈಸ್ತರು   

ಬೀದರ್‌: ಕ್ರಿಸ್‌ಮಸ್‌ಗೆ ಇನ್ನೂ ಐದು ದಿನ ಬಾಕಿ ಇದೆ. ಆಗಲೇ ಜಿಲ್ಲೆಯ ಚರ್ಚಗಳಲ್ಲಿ ಸಂಭ್ರಮ ಮನೆ ಮಾಡಿದೆ. ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಗಿದೆ.

ನಗರದ ಮಂಗಲಪೇಟೆಯ ಸೇಂಟ್‌ ಪೌಲ್ ಮೆಥೋಡಿಸ್ಟ್‌ ಸೆಂಟ್ರಲ್‌ ಚರ್ಚ್‌ನಲ್ಲಿ ಭಾನುವಾರ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಆರಂಭವಾಗಿವೆ.

ನಗರದ ಕುಂಬಾರವಾಡ, ವಿದ್ಯಾನಗರದ ಚರ್ಚ್‌, ರೋಸ್‌ ಮೆಮೊರಿಯಲ್‌ ಚರ್ಚ್‌, ಶಹಾಪೂರ ಗೇಟ್‌ ಬಳಿಯ ಶಹಾಪುರ ಗೇಟ್‌ ಸಮೀಪದ ಸೇಂಟ್‌ ಜೋಸೆಫ್‌ ಚರ್ಚ್‌, ಬೀದರ್‌ ತಾಲ್ಲೂಕಿನ ಮಿರ್ಜಾಪುರದ ಗುಹೆಯಲ್ಲಿರುವ ಚರ್ಚ್‌, ಆಣದೂರಿನ ಸೇಂಟ್‌ ಪೌಲ್ ಮೆಥೋಡಿಸ್ಟ್‌ ಚರ್ಚ್‌ಗಳಲ್ಲಿ ಭಾನುವಾರ ಪ್ರಾರ್ಥನೆ ಸಲ್ಲಿಸಿ ಹಬ್ಬದ ಕಾರ್ಯಕ್ರಮಗಳಿಗೆ ವಿಧ್ಯುಕ್ತ ಚಾಲನೆ ನೀಡಲಾಯಿತು.

ಕ್ರೈಸ್ತರು ಗುಂಪುಗಳಲ್ಲಿ ಗೋದಲಿ ಹಾಡುಗಳನ್ನು ಹಾಡುತ್ತ ಸೃಷ್ಟಿಕೃರ್ತನನ್ನು ಸ್ಮರಿಸುತ್ತ ಕ್ರೈಸ್ತರ ಮನೆ ಮನೆಗೆ ಭೇಟಿ ನೀಡಿ ಶುಭ ಹಾರೈಸಿದರು. ಮಕ್ಕಳು, ಮಹಿಳೆಯರು ಆದಿಯಾಗಿ ಮೆರವಣಿಗೆಯಲ್ಲಿ ಭಾಗವಹಿಸಿ ಭಕ್ತಿಭಾವ ಮೆರೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT