ADVERTISEMENT

‘ಸತತ ಶ್ರಮದಿಂದ ಸ್ಪರ್ಧೆಯಲ್ಲಿ ಯಶಸ್ಸುಗಳಿಸಿ’: ಪ್ರೊ.ಚಿತ್ರಶೇಖರ ಚಿರಳ್ಳಿ ಸಲಹೆ

​ಪ್ರಜಾವಾಣಿ ವಾರ್ತೆ
Published 15 ಜೂನ್ 2025, 15:31 IST
Last Updated 15 ಜೂನ್ 2025, 15:31 IST
ಬಸವಕಲ್ಯಾಣದ ಎಸ್.ಎಸ್.ಕೆ.ಬಸವೇಶ್ವರ ಕಾಲೇಜಿನಲ್ಲಿ ಭಾನುವಾರ ನಡೆದ ಪದವಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಪ್ರೊ.ಚಿತ್ರಶೇಖರ ಚಿರಳ್ಳಿ, ಶಿವಕುಮಾರ ಪಾಟೀಲ, ಎಂ.ಜಿ.ಪಾಟೀಲ ಪಾಲ್ಗೊಂಡಿದ್ದರು
ಬಸವಕಲ್ಯಾಣದ ಎಸ್.ಎಸ್.ಕೆ.ಬಸವೇಶ್ವರ ಕಾಲೇಜಿನಲ್ಲಿ ಭಾನುವಾರ ನಡೆದ ಪದವಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಪ್ರೊ.ಚಿತ್ರಶೇಖರ ಚಿರಳ್ಳಿ, ಶಿವಕುಮಾರ ಪಾಟೀಲ, ಎಂ.ಜಿ.ಪಾಟೀಲ ಪಾಲ್ಗೊಂಡಿದ್ದರು   

ಬಸವಕಲ್ಯಾಣ: ‘ಎಲ್ಲ ಕ್ಷೇತ್ರಗಳಲ್ಲೂ ಸ್ಪರ್ಧೆಯಿದೆ. ಉನ್ನತ ಶಿಕ್ಷಣ, ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ಆಯ್ಕೆ ಮಾಡುವುದರಿಂದ ಇದಕ್ಕಾಗಿ ಸಿದ್ಧತೆ ಕೈಗೊಂಡು ಯಶಸ್ಸು ಗಳಿಸಬೇಕು’ ಎಂದು ಪ್ರೊ.ಚಿತ್ರಶೇಖರ ಚಿರಳ್ಳಿ ಸಲಹೆ ನೀಡಿದರು.

ನಗರದ ಎಸ್.ಎಸ್.ಕೆ.ಬಸವೇಶ್ವರ ಕಾಲೇಜಿನಲ್ಲಿ ಭಾನುವಾರ ನಡೆದ ಬಿ.ಎ ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಕಷ್ಟಪಟ್ಟು ಓದಬೇಕು. ಜೊತೆಗೆ ಸತತ ಪ್ರಯತ್ನವಿರಬೇಕು. ಆಗ ಮಾತ್ರ ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡಬಹುದು’ ಎಂದರು.

ADVERTISEMENT

ಪ್ರಾಚಾರ್ಯ ಶಿವಕುಮಾರ ಪಾಟೀಲ ಮಾತನಾಡಿ, ‘ಶಿಸ್ತು, ಸಂಯಮದಿಂದ ಇರಬೇಕು. ಕರ್ತವ್ಯ ನಿಷ್ಠರಾಗಬೇಕು. ಬದುಕಿನಲ್ಲಿ ಎದುರಾಗುವ ಉತ್ತಮ ಅವಕಾಶಗಳ ಸದುಪಯೋಗ ಮಾಡಿಕೊಳ್ಳಬೇಕು’ ಎಂದರು.

ಎಂ.ಜಿ.ಪಾಟೀಲ ಮಾತನಾಡಿ, ‘ನಿರಂತರ ಅಧ್ಯಯನಗೈಯಬೇಕು. ಬರೀ ನೌಕರಿಗಾಗಿ ಶಿಕ್ಷಣ ಪಡೆಯದೇ ಜ್ಞಾನ ಗಳಿಕೆ ಮೂಲ ಉದ್ದೇಶವಾಗಿರಬೇಕು’ ಎಂದರು.

ಅಂಬಿಕಾ, ಸತೀಶ, ಆಶೀಷ, ರಾಜೇಶ್ರೀ, ವೈಷ್ಣವಿ, ಕೀರ್ತಿ ಮಾತನಾಡಿದರು.

ಪ್ರೊ.ವಿಠೋಬಾ ದೊಣ್ಣೆಗೌಡರ್, ಕಲ್ಯಾಣಪ್ಪ ನಾವದಗಿ, ರಮೇಶ ಕೆ.ಬಿ., ಸೂರ್ಯಕಾಂತ ನಾಸೆ, ಮಹಾದೇವ, ಸತೀಶ ರಾಠೋಡ, ಭೀಮಾಶಂಕರ ಪೂಜಾರಿ, ಲಕ್ಷ್ಮಿಬಾಯಿ ಭಂಕೂರ, ಭಾರತಿ ಮಠ, ವೈಶಾಲಿ, ಚನ್ನಮ್ಮ, ಶಿಲ್ಪಾ, ಪುಜಾ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.