ಭಾಲ್ಕಿ: ಕಣ್ಣಿಗೆ ಕಾಣುವ ನೈಜ ದೇವರು ಪಾಲಕರು ಆಗಿದ್ದು, ಪ್ರತಿಯೊಬ್ಬರು ಹೆತ್ತವರಲ್ಲಿಯೇ ಭಗವಂತನನ್ನು ಕಾಣಬೇಕು ಎಂದು ಬಸವಕಲ್ಯಾಣ ಗವಿಮಠದ ಅಭಿನವ ಘನಲಿಂಗ ಶಿವಾಚಾರ್ಯರು ಹೇಳಿದರು.
ಪಟ್ಟಣದ ಖಡಕೇಶ್ವರ ವಿದ್ಯಾ ಮಂದಿರದಲ್ಲಿ ಆಯೋಜಿಸಿದ್ದ ಮಾತೃ, ಪಿತೃ ಪಾದಪೂಜೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ವಕೀಲೆ ಆರತಿ ತಿವಾರಿ ಮಾತನಾಡಿ, ಸದ್ಯ ಮಕ್ಕಳಿಗೆ ಸಂಸ್ಕಾರಯುತ, ಮೌಲ್ಯಯುತ ಶಿಕ್ಷಣ ಕೊಡುವುದು ಬಹಳಷ್ಟು ಅತ್ಯವಶ್ಯಕವಾಗಿದೆ ಎಂದು ತಿಳಿಸಿದರು.
ಭಗುಸಿಂಗ್ ಜಾಧವ್ ಮಾತನಾಡಿ, ಪಾಲಕರು ಮಕ್ಕಳಿಗೆ ಮನೆಯಲ್ಲಿ ಸಂಸ್ಕಾರ ಕಲಿಸುವುದರ ಮೂಲಕ ಭಾರತೀಯ ಸಂಸ್ಕೃತಿ, ಸಂಪ್ರದಾಯವನ್ನು ಉಳಿಸಿಕೊಂಡು ಹೋಗಬೇಕು ಎಂದರು.
ಬಿಆರ್‌ಪಿ ಶಕುಂತಲಾ ಸಾಲಿಮನಿ, ಸಿಆರ್‌ಪಿ ಅರ್ಚನಾ ಪವಾರ್, ಪ್ರಮುಖರಾದ ಸುಧೀರನಾಯಕ, ಪ್ರಭುರಾವ್ ಧೂಪೆ, ಅಶೋಕ ಲೋಖಂಡೆ, ಮುಖ್ಯಶಿಕ್ಷಕ ಶಿವಲಿಂಗ ಕುಂಬಾರ, ಚಂದ್ರಕಾಂತ ತಳವಾಡೆ, ದಯಾನಂದ ಪವಾರ್, ರೇಕುನಾಯಕ್, ಉಮಕಾಂತ ಮೇತ್ರೆ, ಮಹೇಶ ಶೀಲವಂತ, ಚಂದ್ರಕಾಂತ ಠಮಕೆ, ಆನಂದ ಕಲ್ಯಾಣೆ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.