ADVERTISEMENT

ಅಗ್ನಿ ಪಥ ಸೇನಾ ನೇಮಕಾತಿ ರ‍್ಯಾಲಿ: ಮೊದಲ ದಿನ 2049 ಅಭ್ಯರ್ಥಿಗಳು ಭಾಗಿ

ಅಗ್ನಿ ಪಥ ಸೇನಾ ನೇಮಕಾತಿ ರ‍್ಯಾಲಿ ಆರಂಭ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2022, 6:11 IST
Last Updated 5 ಡಿಸೆಂಬರ್ 2022, 6:11 IST
ಬೀದರ್‌ನ ನೆಹರೂ ಕ್ರೀಡಾಂಗಣದಲ್ಲಿ ಸೋಮವಾರ ಅಗ್ನಿ ಪಥದ ಅಗ್ನಿ ವೀರರಿಗಾಗಿ ಆರಂಭವಾದ ಸೇನಾ ನೇಮಕಾತಿ ರ್‍ಯಾಲಿ ಯಲ್ಲಿ ರಾಯಚೂರಿನ ಅಭ್ಯರ್ಥಿಗಳು ಪಾಲ್ಗೊಂಡಿದ್ದರು/ ಚಿತ್ರ: ಗುರುಪಾದಪ್ಪ ಸಿರ್ಸಿ
ಬೀದರ್‌ನ ನೆಹರೂ ಕ್ರೀಡಾಂಗಣದಲ್ಲಿ ಸೋಮವಾರ ಅಗ್ನಿ ಪಥದ ಅಗ್ನಿ ವೀರರಿಗಾಗಿ ಆರಂಭವಾದ ಸೇನಾ ನೇಮಕಾತಿ ರ್‍ಯಾಲಿ ಯಲ್ಲಿ ರಾಯಚೂರಿನ ಅಭ್ಯರ್ಥಿಗಳು ಪಾಲ್ಗೊಂಡಿದ್ದರು/ ಚಿತ್ರ: ಗುರುಪಾದಪ್ಪ ಸಿರ್ಸಿ   

ಬೀದರ್: ನೆಹರೂ ಕ್ರೀಡಾಂಗಣದಲ್ಲಿ ಸೋಮವಾರ ಅಗ್ನಿ ಪಥನ್ ಅಗ್ನಿ ವೀರರಿಗಾಗಿ ಆರಂಭವಾದ ಸೇನಾ ನೇಮಕಾತಿ ರ‍್ಯಾಲಿಯಲ್ಲಿ 2,049 ಅಭ್ಯರ್ಥಿಗಳು ಭಾಗವಹಿಸಿದ್ದರು.

ಬೀದರ್ ತಹಶೀಲ್ದಾರ್ ಅಣ್ಣಾರಾವ್ ಪಾಟೀಲ, ಬುಡಾ ಆಯುಕ್ತ ಅಭಯಕುಮಾರ, ಮುಖ್ಯ ಪಶು ವೈದ್ಯಾಧಿಕಾರಿ ಡಾ.ಗೌತಮ ಅರಳಿ ಹಾಗೂ ನಗರಸಭೆ ಎಇಇ ಹಿರೇಮಠ ಬೆಳಗಿನ ಜಾವ 4 ಗಂಟೆಗೆ ಸೇನಾ ನೇಮಕಾತಿ ರ್‍ಯಾಲಿ ಸ್ಥಳದಲ್ಲಿ ಹಾಜರಿದ್ದು, ಅಗತ್ಯ ಸೌಕರ್ಯಗಳ ವ್ಯವಸ್ಥೆ ಮಾಡಿದರು.

ಡಿವೈಎಸ್‌ಪಿ ಸತೀಶ ನೇತೃತ್ವದಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್‌ ಮಾಡಲಾಗಿತ್ತು. ಸೇನಾ ನೇಮಕಾತಿ ರ‍್ಯಾಲಿ ಪ್ರಯುಕ್ತ ನಗರದಲ್ಲಿ ಕೆಲ ಸಂಚಾರ ಮಾರ್ಗಗಳಲ್ಲಿ ಬದಲಿಸಲಾಗಿತ್ತು.

ADVERTISEMENT

ಈ ದಾಖಲೆಗಳು ಕಡ್ಡಾಯ

ಅಗ್ನಿ ಪಥನ್ ಅಗ್ನಿ ವೀರರಿಗಾಗಿ ಬೀದರ್‌ನಲ್ಲಿ ನಡೆಯುತ್ತಿರುವ ಸೇನಾ ನೇಮಕಾತಿ ರ‍್ಯಾಲಿಯಲ್ಲಿ ಪಾಲ್ಗೊಳ್ಳುತ್ತಿರುವ ಅಭ್ಯರ್ಥಿಗಳು ಕೆಲ ದಾಖಲೆಗಳನ್ನು ಕಡ್ಡಾಯವಾಗಿ ಸಲ್ಲಿಸಬೇಕು ಎಂದು ಸೇನಾ ನೇಮಕಾತಿ ಅಧಿಕಾರಿಗಳು ತಿಳಿಸಿದ್ದಾರೆ.

ಎಆರ್‌ಒ ನೀಡಿದ ವೈಯಕ್ತಿಕ ವಿವರ, ಪ್ರವೇಶಪತ್ರ, ಅಧಾರ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಅಂಕಪಟ್ಟಿ,

ಅರ್ಜಿಯಲ್ಲಿ ಉಲ್ಲೇಖಿಸಿದವರು ಎನ್‌ಸಿಸಿ, ಕ್ರೀಡಾ ಪ್ರಮಾಣಪತ್ರ, ರಿಲೇಶನ್‌ಶಿಪ್‌ ಸರ್ಟಿಫಿಕೇಟ್‌ನ ಎರಡು ಪ್ರತಿಗಳನ್ನು ಸಲ್ಲಿಸಬೇಕು. ರಹವಾಸಿ ಪ್ರಮಾಣಪತ್ರ (Domicle), ಜಾತಿ ಪ್ರಮಾಣಪತ್ರ, ಆರು ತಿಂಗಳ ಅವಧಿಯಲ್ಲಿ ಪೊಲೀಸರಿಂದ ಪಡೆದ ನಡತೆ ಪ್ರಮಾಪತ್ರ, ಶಾಲಾ ನಡತೆ ಪ್ರಮಾಣಪತ್ರ, ಪಂಚಾಯಿತಿ ಅಧ್ಯಕ್ಷ, ನಗರ ಸ್ಥಳೀಯ ಸಂಸ್ಥೆಗಳ ಪೌರಾಯುಕ್ತರಿಂದ ಪಡೆದ ನಡತೆ ಪ್ರಮಾಣಪತ್ರ, ಮದುವೆಯಾಗದ ಪ್ರಮಾಣಪತ್ರ, ಪಾನ್‌ಕಾರ್ಡ್‌ ನಕಲು ಪ್ರತಿ ಸಲ್ಲಿಸಬೇಕು.

ಸೇನೆ ಸೂಚಿಸಿದ ಮಾದರಿಯಲ್ಲಿ ₹ 10 ಮೊತ್ತದ ಅಫಿಡೆವಿಟ್‌ ಸಿದ್ಧಪಡಿಸಿ, ನೋಟರಿಯಿಂದ ದೃಢೀಕರಿಸಿದ ಒರಿಜಿನಲ್‌ ಪ್ರತಿಯನ್ನು ಸಲ್ಲಿಸಬೇಕು. ಅಫಿಡೆವಿಟ್‌ ತರದವರಿಗೆ ಪ್ರವೇಶ ಇರುವುದಿಲ್ಲ. ಮೊದಲ ದಿನ ಅಫಿಡೆವಿಟ್‌ ತರದ 128 ಅಭ್ಯರ್ಥಿಗಳನ್ನು ವಾಪಸ್‌ ಕಳಿಸಲಾಗಿತ್ತು. ಹೀಗಾಗಿ ಕಡ್ಡಾಯವಾಗಿ ಅಪಿಢೆವಿಟ್‌ ಅನ್ನು ತರಬೇಕು ಎಂದು ಸೇನಾ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.