ADVERTISEMENT

ಅಕ್ಕಮಹಾದೇವಿ ಶ್ರೇಷ್ಠ ಕವಯತ್ರಿ; ಸುಧಾ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2022, 6:45 IST
Last Updated 18 ಏಪ್ರಿಲ್ 2022, 6:45 IST
ಔರಾದ್ ತಾಲ್ಲೂಕಿನ ಸಂತಪುರನಲ್ಲಿ ನಡೆದ ಅಕ್ಕಮಹಾದೇವಿ ಜಯಂತಿ ಕಾರ್ಯಕ್ರಮದಲ್ಲಿ ಉಪನ್ಯಾಸಕರು, ವಿದ್ಯಾರ್ಥಿಗಳು ಇದ್ದರು
ಔರಾದ್ ತಾಲ್ಲೂಕಿನ ಸಂತಪುರನಲ್ಲಿ ನಡೆದ ಅಕ್ಕಮಹಾದೇವಿ ಜಯಂತಿ ಕಾರ್ಯಕ್ರಮದಲ್ಲಿ ಉಪನ್ಯಾಸಕರು, ವಿದ್ಯಾರ್ಥಿಗಳು ಇದ್ದರು   

ಔರಾದ್: ‘ಶರಣರಲ್ಲಿ ಅಕ್ಕಮಹಾದೇವಿ ವಚನಗಳು ಶ್ರೇಷ್ಠವಾಗಿವೆ’ ಎಂದು ಉಪನ್ಯಾಸಕಿ ಸುಧಾ ಕೌಟಗೆ ಹೇಳಿದರು.

ತಾಲ್ಲೂಕಿನ ಸಂತಪುರ ಸಿದ್ಧರಾಮೇಶ್ವರ ಕಾಲೇಜಿನಲ್ಲಿ ಈಚೆಗೆ ನಡೆದ ಅಕ್ಕಮಹಾದೇವಿ ಜಯಂತಿ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.

‘ಅಕ್ಕನ ಒಂದೊಂದು ವಚನ ಗಳ ಸಾಲು ಬಹಳ ಅದ್ಭುತ ವೈಚಾರಿಕತೆಯಿಂದ ಕೂಡಿವೆ. ಅಂದಿನ ಸಮಾಜದಲ್ಲಿನ ಮೌಢ್ಯತೆ, ಜಾತಿಯತೆ, ಕಂದಾಚಾರಗಳನ್ನು ತಮ್ಮ ಬರವಣಿಗೆ ಮೂಲಕ ಸಮಾಜವನ್ನು ಜಾಗೃತಗೊಳಿಸಿದರು’ ಎಂದರು.

ADVERTISEMENT

ಕನ್ನಡ ಸಾಹಿತ್ಯದಲ್ಲಿ ಅಕ್ಕನ ವಚನಗಳಿಗೆ ವಿಶೇಷತೆ ಇದೆ. ಮಹಿಳಾ ಸಾಹಿತಿಗಳಿಗೆ ಅವರು ಪ್ರೇರಣೆ ಆಗಲಿದ್ದಾರೆ’ ಎಂದು ತಿಳಿಸಿದರು.

ಪ್ರಾಂಶುಪಾಲ ನವೀಲಕುಮಾರ ಉತ್ಕಾರ್ ಮಾತನಾಡಿ, ‘ಅಕ್ಕನವರ ಜೀವನ ಇಡೀ ಮಹಿಳಾ ಕುಲಕ್ಕೆ ಗೌರವ. ಇಂದಿನ ವಿದ್ಯಾರ್ಥಿನಿಯರು ಅವರ ವಚನಗಳು ಓದಿ ಅವರ ಬಗ್ಗೆ ಒಂದಿಷ್ಟು ತಿಳಿದುಕೊಳ್ಳಬೇಕು’ ಎಂದರು.

ಉಪನ್ಯಾಸಕ ಕಲ್ಲಪ್ಪ ಬುಟ್ಟೆ, ಭೂಷಣ ಪಾಟೀಲ, ವನದೇವಿ ಎಕ್ಕೆಳೆ, ಯೋಹಾನ್ ಬರುರಕರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.