ADVERTISEMENT

ಸ್ವಾತಂತ್ರ್ಯದ ಅಮೃತ ಮಹೋತ್ಸವ: ರ್‍ಯಾಲಿ, ಸಾಂಸ್ಕೃತಿಕ ಸಂಭ್ರಮ

ಮನೆ ಮನೆಗಳ ಮೇಲೆ ಹಾರಾಡಿದ ತಿರಂಗಾ: ಅಭಿಮಾನ ಮೆರೆದ ಜನ

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2022, 11:53 IST
Last Updated 14 ಆಗಸ್ಟ್ 2022, 11:53 IST
ಬೀದರ್‌ನಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಪ್ರಯುಕ್ತ ಐಎಂಎ ಪದಾಧಿಕಾರಿಗಳು, ವೈದ್ಯರು ಹಾಗೂ ನರ್ಸಿಂಗ್‌ ಸಿಬ್ಬಂದಿ ಮೆರವಣಿಗೆ ನಡೆಸಿದರು
ಬೀದರ್‌ನಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಪ್ರಯುಕ್ತ ಐಎಂಎ ಪದಾಧಿಕಾರಿಗಳು, ವೈದ್ಯರು ಹಾಗೂ ನರ್ಸಿಂಗ್‌ ಸಿಬ್ಬಂದಿ ಮೆರವಣಿಗೆ ನಡೆಸಿದರು   

ಬೀದರ್: ಸ್ವಾತಂತ್ರ್ಯದ ಅಮೃತ ಮಹೋತ್ಸವದ ಪ್ರಯುಕ್ತ ಜಿಲ್ಲೆಯ ಹಲವೆಡೆ ಭಾನುವಾರ ಸಂಘ ಸಂಸ್ಥೆಗಳಿಂದ ತಿರಂಗಾ ಯಾತ್ರೆ, ವಿದ್ಯಾರ್ಥಿಗಳಿಂದ ಧ್ವಜ ಮೆರವಣಿಗೆ ಹಾಗೂ ಬೈಕ್‌ ರ್‍ಯಾಲಿಗಳು ನಡೆದವು. ಶಾಲಾ ವಿದ್ಯಾರ್ಥಿಗಳು ಮೆರವಣಿಗೆಯಲ್ಲಿ ಉತ್ಸಾಹದಿಂದ ಪಾಲ್ಗೊಂಡು ಸಂಭ್ರಮಿಸಿದರು.

ಭಾರತೀಯ ವೈದ್ಯಕೀಯ ಸಂಘದ ಜಿಲ್ಲಾ ಘಟಕದ ವತಿಯಿಂದ ವೈದ್ಯರು ಹಾಗೂ ನರ್ಸ್‌ಗಳು ಕೆಇಬಿ ರಸ್ತೆಯಲ್ಲಿರುವ ಎಎಂಎ ಸಭಾಭವನದ ಆವರಣದಿಂದ ಧ್ವಜ ಹಿಡಿದುಕೊಂಡು ಮೆರವಣಿಗೆ ಹೊರಟು ರೋಟರಿ ವೃತ್ತ, ಡಾ.ಬಿ.ಆರ್‌.ಅಂಬೇಡ್ಕರ್‌ ವೃತ್ತ, ಬಸವೇಶ್ವರ ವೃತ್ತ, ಶರಣ ಹರಳಯ್ಯ ವೃತ್ತ ಮಾರ್ಗವಾಗಿ ಮರಳಿ ಐಎಂಒ ಸಭಾಭವನದ ಆವರಣಕ್ಕೆ ಬಂದು ಮುಕ್ತಾಯಗೊಂಡಿತು.

ಐಎಂಎ ಅಧ್ಯಕ್ಷ ಡಾ.ವಿನೋದ ಸಾವಳಗಿ, ಡಾ.ಮಲ್ಲಿಕಾರ್ಜುನ ಎಮ್ಮೆ, ಡಾ.ಚಂದ್ರಕಾಂತ ಗುದಗೆ, ಡಾ.ಆನಂದರಾವ್, ಡಾ.ಎಸ್‌.ಆರ್‌.ಹನಮಶೆಟ್ಟಿ, ಡಾ.ವಿಜಯ ಕೋಟೆ, ಡಾ.ಅನು ತಲವಾಡೆ, ಡಾ.ಶಶಾಂಕ ಕುಲಕರ್ಣಿ, ಡಾ.ಸಂತೋಷ ರೇಜಂತಲ್, ಡಾ.ಸಯ್ಯದ್‌ ಖಾದ್ರಿ, ಡಾ.ಉಮಾ ದೇಶಮುಖ, ಡಾ.ಎ.ಸಿ.ಲಲಿತಮ್ಮ ಹಾಗೂ ನರ್ಸಿಂಗ್‌ ವಿದ್ಯಾರ್ಥಿಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.