ಬಸವಕಲ್ಯಾಣ: ‘ಬಸವ ಮಹಾಮನೆ ಟ್ರಸ್ಟ್‌ನಿಂದ ನಗರದಲ್ಲಿ ಫೆಬ್ರುವರಿ 21, 22 ಮತ್ತು 23ರಂದು 7ನೇ ಅನುಭವ ಮಂಟಪ ಸಂಸತ್ತು ಕಾರ್ಯಕ್ರಮ ನಡೆಯಲಿದೆ. ಕೊನೆಯ ದಿನ ಸಮಾನತಾ ಸಮಾವೇಶ ಹಮ್ಮಿಕೊಳ್ಳಲಾಗಿದೆ’ ಎಂದು ಬೆಲ್ದಾಳ ಸಿದ್ಧರಾಮ ಶರಣರು ತಿಳಿಸಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,‘ಸಂಸತ್ತಿನಲ್ಲಿ ಶರಣ ಸಂಸ್ಕೃತಿ, ಬಸವ ಸಿದ್ಧಾಂತ ತಿಳಿಸಲಾಗುತ್ತದೆ. ಇದಕ್ಕಾಗಿ ನಾಡಿನ ವಿವಿಧೆಡೆಯವರು ಹೆಸರು ನೋಂದಾಯಿಸಿದ್ದು, ಮೂರು ದಿನ ಹಾಜರಿರುತ್ತಾರೆ’ ಎಂದರು.
‘ಫೆಬ್ರುವರಿ23ರಂದು ಬೆಳಿಗ್ಗೆ ಸಮಾನತಾ ಸಮಾವೇಶ ನಡೆಯುವುದು. ಅನುಭವ ಮಂಟಪ ಅಧ್ಯಕ್ಷ ಬಸವಲಿಂಗ ಪಟ್ಟದ್ದೇವರು, ಮಲಗಿ ಜಗದೀಶ್ವರಿ ಮಾತಾ, ಮನಗೂಳಿ ವಿರತೀಶಾನಂದ ಸ್ವಾಮೀಜಿ, ಭಂತೆ ಧಮ್ಮಾನಂದ ಅಣದೂರ, ಮೌಲಾನಾ ಮಹ್ಮದ್ ಸಿದ್ದಿಕಿ ನಾದ್ವಿ, ಧರ್ಮಾಧ್ಯಕ್ಷ ರಾಬರ್ಟ್ ಮೈಕೆಲ್ ಮಿರಾಂಡಾ, ಗ್ಯಾನಿ ಬಲಬೀರಸಿಂಗ್ ಸಾನ್ನಿಧ್ಯ ವಹಿಸುವರು’ ಎಂದು ಹೇಳಿದರು.
‘ಸಮಾಜ ಕಲ್ಯಾಣ ಸಚಿವ ಎಚ್.ಸಿ.ಮಹಾದೇವಪ್ಪ, ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ, ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ, ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ, ಪೌರಾಡಳಿತ ಸಚಿವ ರಹೀಂ ಖಾನ್, ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಅಜಯಸಿಂಗ್, ಮಾಜಿ ಸಂಸದ ಭಗವಂತ ಖೂಬಾ ಅತಿಥಿಗಳಾಗಿ ಪಾಲ್ಗೊಳ್ಳುವರು. ಶಾಸಕ ಶರಣು ಸಲಗರ ಅಧ್ಯಕ್ಷತೆ ವಹಿಸುವರು’ ಎಂದರು.
‘ಪ್ರಸಕ್ತ ಸಾಲಿನ ‘ಸೌಹಾರ್ದ ರತ್ನ’ ಪ್ರಶಸ್ತಿಯನ್ನು ಬೀದರ್‌ನ ಶಾಹೀನ್ ಶಿಕ್ಷಣ ಸಂಸ್ಥೆಗಳ ಸಮೂಹದ ಸಂಸ್ಥಾಪಕ ಅಧ್ಯಕ್ಷ ಅಬ್ದುಲ್ ಖದೀರ್ ಅವರಿಗೆ ನೀಡಲಾಗುತ್ತಿದೆ’ ಎಂದು ತಿಳಿಸಿದರು.
ಕಾರ್ಯಕ್ರಮ ಸಮಿತಿ ಪ್ರಧಾನ ಕಾರ್ಯದರ್ಶಿ ಶ್ರೀಕಾಂತ ಸ್ವಾಮಿ, ಲಕ್ಷ್ಮಣ ದಸ್ತಿ, ಮನೋಹರ ಮೈಸೆ, ಪಿಂಟು ಕಾಂಬಳೆ ಮಾತನಾಡಿದರು. ಶಾಮರಾವ್ ಪ್ಯಾಟಿ, ಸಂಜೀವ ಗಾಯಕವಾಡ, ಎಂ.ಬಿ.ನಿಂಗಪ್ಪ, ದಿಗಂಬರ ಜಲ್ದೆ, ಸಿಕಂದರ ಶಿಂಧೆ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.