ADVERTISEMENT

₹1.10 ಲಕ್ಷ ನಗದು, ಬೈಕ್‌ ವಶ

ಎಟಿಎಂನಲ್ಲಿ ಹಣ ಕದಿಯುತ್ತಿದ್ದವನ ಬಂಧನ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2021, 14:35 IST
Last Updated 5 ಏಪ್ರಿಲ್ 2021, 14:35 IST
ಬೀದರ್‌ನ ಅಪರಾಧ ವಿಭಾಗದ ಪೊಲೀಸರು ಎಟಿಎಂನಲ್ಲಿ ಹಣ ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಬಂಧಿಸಿದ್ದಾರೆ
ಬೀದರ್‌ನ ಅಪರಾಧ ವಿಭಾಗದ ಪೊಲೀಸರು ಎಟಿಎಂನಲ್ಲಿ ಹಣ ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಬಂಧಿಸಿದ್ದಾರೆ   

ಬೀದರ್‌: ನಗರದಲ್ಲಿ ಎರಡು ವರ್ಷಗಳಿಂದ ಎಟಿಎಂಗಳಲ್ಲಿ ಹಣ ಪಡೆಯಲು ಬರುತ್ತಿದ್ದವರಿಗೆ ಸಹಾಯ ಮಾಡುವ ನೆಪದಲ್ಲಿ ಪಿನ್‌ಕೋಡ್‌ ಪಡೆದು ಅವರ ಗಮನ ಬೇರೆ ಕಡೆಗೆ ಸೆಳೆದು ನಕಲಿ ಎಟಿಎಂ ಕಾರ್ಡ್‌ ಕೊಟ್ಟು ನಂತರ ಹಣ ಲಪಟಾಯಿಸುತ್ತಿದ್ದ ವ್ಯಕ್ತಿಯನ್ನು ಅಪರಾಧ ವಿಭಾಗದ ಪೊಲೀಸರು ಬಂಧಿಸಿದ್ದಾರೆ.

ನಗರದ ಕೆಇಬಿ ಸಮೀಪದ ಎಸ್‌ಬಿಐ ಎಟಿಎಂ ಬಳಿ ಸೋಮವಾರ ಆಂಧ್ರಪ್ರದೇಶದ ಗುಂಟೂರ್‌ ಜಿಲ್ಲೆಯ ನರಸರಾವ್‌ಪೇಟದ ತುಮ್ಮಲ್ ಉದಯಕುಮಾರ ರಾಮಲಿಂಗಯ್ಯ ಎನ್ನುವವರನ್ನು ಬಂಧಿಸಿ ಆರೋಪಿಯಿಂದ
₹1.10 ಲಕ್ಷ ನಗದು, ವಿವಿಧ ಬ್ಯಾಂಕ್‌ಗಳ 112 ಎಟಿಎಂ ಕಾರ್ಡ್ ಹಾಗೂ ಸ್ಪ್ಲೆಂಡರ್ ಪ್ಲಸ್ ದ್ವಿಚಕ್ರವಾಹನ ವಶಪಡಿಸಿಕೊಂಡಿದ್ದಾರೆ.

ಆರೋಪಿ ವಿರುದ್ಧ ನಾಲ್ಕು ಪ್ರಕರಣಗಳಲ್ಲಿ ಒಟ್ಟು ₹1.81 ಲಕ್ಷ ವಂಚನೆ ಮಾಡಿರುವ ಆರೋಪ ಇದೆ. ಸಿಇಎನ್‌ ಅಪರಾಧ ಪೊಲೀಸ್‌ ಠಾಣೆಯ ಪೊಲೀಸ್‌ ಇನ್‌ಸ್ಪೆಕ್ಟರ್ ಬಸವರಾಜ ಫುಲಾರಿ, ಪಿಎಸ್‌ಐ ಸುನೀತಾ, ಸಿಬ್ಬಂದಿ ಅರುಣಕುಮಾರ, ಶಿವಕುಮಾರ, ಮಲ್ಲಿಕಾರ್ಜುನ, ಸಾದಕ್ ಅಲಿ, ರವಿ, ಹರಿಕಿಶನ್, ಭರತ, ದಶರಥ, ಸಿದ್ರಾಮೇಶ, ಪ್ರಶಾಂತ, ಸುನೀಲ್, ಮಾಯಾ ಆರೋಪಿಯನ್ನು ಬಂಧಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.