ADVERTISEMENT

ಔರಾದ್ ಬೈಕ್‌-ಕಾರು ನಡುವೆ ಡಿಕ್ಕಿ: ಯುವಕ ಸಾವು

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2026, 15:37 IST
Last Updated 21 ಫೆಬ್ರುವರಿ 2026, 15:37 IST
<div class="paragraphs"><p>ಆಕಾಶ</p></div>

ಆಕಾಶ

   

ಔರಾದ್ (ಬೀದರ್‌ ಜಿಲ್ಲೆ): ಬೈಕ್ ಕಾರು‌ ನಡುವೆ ಡಿಕ್ಕಿಯಾಗಿ ಯುವಕನೊಬ್ಬ ಸಾವನ್ನಪ್ಪಿರುವ ಘಟನೆ ಪಟ್ಟಣದ ಬಸ್‌ ನಿಲ್ದಾಣ ಎದುರು ಶನಿವಾರ ನಡೆದಿದೆ.

ತಾಲ್ಲೂಕಿನ ಎಕಂಬಾ ಗ್ರಾಮದ ಆಕಾಶ ಜ್ಞಾನೋಬಾ ವಾಡಿಕರ್ (18) ಮೃತ ಯುವಕ.

ADVERTISEMENT

ದ್ವಿಚಕ್ರ ವಾಹನದ ಮೇಲೆ ಬಸ್‌ ನಿಲ್ದಾಣ ಕಡೆ ತೆರಳುತ್ತಿದ್ದ ವೇಳೆ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದಿದೆ. ಬಳಿಕ ನೆಲದ ಮೇಲೆ ಹಾರಿ ಬಿದ್ದ ಸವಾರನ ಮೇಲೆ ಟ್ರ್ಯಾಕ್ಟರ್‌ ಹರಿದಿದೆ. ತೀವ್ರ ಗಾಯಗೊಂಡ ಯುವಕನನ್ನು ಆಸ್ಪತ್ರೆಗೆ ಕೊಂಡೊಯ್ಯುವ ವೇಳೆ ದಾರಿ ಮಧ್ಯೆ ಕೊನೆಯುಸಿರೆಳೆದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಸ್ಥಳಕ್ಕೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಔರಾದ್ ಠಾಣೆಯಲ್ಲಿ ‌ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.