ಸಾಂದರ್ಭಿಕ ಚಿತ್ರ
ಔರಾದ್ (ಬೀದರ್): ಔರಾದ್ ತಾಲ್ಲೂಕಿನ ಎಕಂಬಾ ಗ್ರಾಮದ ಬಾವಿವೊಂದರಲ್ಲಿ ಒಬ್ಬ ಪುರುಷ ಹಾಗೂ ಒಬ್ಬ ಮಹಿಳೆಯ ಶವ ಪತ್ತೆಯಾಗಿದೆ.
ಪತ್ತೆಯಾದ ಶವ ಔರಾದ್ ನಿವಾಸಿ ಉಮರ ನಜೀರ್ (24) ಹಾಗೂ ಎಕಂಬಾ ಗ್ರಾಮದ ಮಹಿಳೆ ಅನುಷಾ (35) ಎಂದು ಗುರುತಿಸಲಾಗಿದೆ
ಎಕಂಬಾ ಗ್ರಾಮದ ಕೆರೆಯಲ್ಲಿ ಇರುವ ಬಾವಿಯಲ್ಲಿ ಈ ಇಬ್ಬರ ಶವ ಮಂಗಳವಾರ ಪತ್ತೆಯಾಗಿವೆ. ಬಾವಿಯಿಂದ ಶವ ತೆಗೆದು ಮರಣೋತ್ತರ ಪರೀಕ್ಷೆ ನಡೆಸಿ ಸಂಬಂಧಿಕರಿಗೆ ಹಸ್ತಾಂತರಿಸಲಾಗಿದೆ. ತನಿಖೆ ನಂತರವೇ ಇವರ ಸಾವಿಗೆ ಕಾರಣ ಗೊತ್ತಾಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಕುರಿತು ಔರಾದ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.