ADVERTISEMENT

ಔರಾದ್: ರೈತ ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2025, 5:20 IST
Last Updated 19 ನವೆಂಬರ್ 2025, 5:20 IST
pavan
pavan   

ಔರಾದ್: ತಾಲ್ಲೂಕಿನ ಪಾಶಾಪುರ ಗ್ರಾಮದ ರೈತ ಪವನ ಮಾರುತಿ ಆಲೂರೆ (26) ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಈ ವರ್ಷ ಹೆಚ್ಚಿನ ಮಳೆಯಾಗಿ ಬೆಳೆ ಹಾನಿಯಾಗಿದ್ದರಿಂದ ಹಾಗೂ ಸಾಲದ ಒತ್ತಡ ಹೆಚ್ಚಾಗಿ ನ.10ರಂದು ಹೊಲದಲ್ಲಿ ಹುಲ್ಲಿಗೆ ಹಾಕುವ ಕೀಟನಾಶಕ ಕುಡಿದಿದ್ದರು. ಅಸ್ವಸ್ಥಗೊಂಡಿದ್ದ ಪವನ ಅವರನ್ನು ಬ್ರಿಮ್ಸಗೆ ಸಾಗಿಸಿ ಚಿಕಿತ್ಸೆ ಕೊಡಿಸಲಾಯಿತು. ಹೆಚ್ಚಿ ಚಿಕಿತ್ಸೆಗಾಗಿ ಹೈದರಾಬಾದ್‌ನ ಆಸ್ಪತ್ರೆಗೆ ಸೇರಿಸಲಾಗಿತ್ತು. ಚಿಕಿತ್ಸೆಗೆ ಸ್ಫಂದಿಸದೇ ಮಂಗಳವಾರ ಕೊನೆಯುಸಿರೆಳೆದರು ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ಮೃತರಿಗೆ ಪತ್ನಿ ಹಾಗೂ ಆರು ತಿಂಗಳು ಹೆಣ್ಣು ಮಗು ಇದೆ. ಈ ಕುರಿತು ಸಂತಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.