ADVERTISEMENT

ಔರಾದ್ | ಡಿಸಿ ಭರವಸೆ: ಗುಡಿಸಲುವಾಸಿಗಳ ಧರಣಿ ಅಂತ್ಯ 

​ಪ್ರಜಾವಾಣಿ ವಾರ್ತೆ
Published 30 ಜನವರಿ 2026, 6:13 IST
Last Updated 30 ಜನವರಿ 2026, 6:13 IST
ಔರಾದ್‌ ತಹಶೀಲ್ದಾರ್‌ ಕಚೇರಿ ಆವರಣದಲ್ಲಿ ನಡೆಯುತ್ತಿದ್ದ ಗುಡಿಸಲುವಾಸಿಗಳ ಪ್ರತಿಭಟನೆ ಸ್ಥಳಕ್ಕೆ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಭೇಟಿ ನೀಡಿ ಧರಣಿ ಅಂತ್ಯಗೊಳಿಸಿದರು
ಔರಾದ್‌ ತಹಶೀಲ್ದಾರ್‌ ಕಚೇರಿ ಆವರಣದಲ್ಲಿ ನಡೆಯುತ್ತಿದ್ದ ಗುಡಿಸಲುವಾಸಿಗಳ ಪ್ರತಿಭಟನೆ ಸ್ಥಳಕ್ಕೆ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಭೇಟಿ ನೀಡಿ ಧರಣಿ ಅಂತ್ಯಗೊಳಿಸಿದರು   

ಔರಾದ್: ಎರಡು ಎಕರೆ ಜಮೀನು ಮಂಜೂರು ಮಾಡಿ ಅಲ್ಲಿ ಅಗತ್ಯ ಮೂಲ ಸೌಲಭ್ಯ ಕಲ್ಪಿಸಲು ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರು ಭರವಸೆ ನೀಡಿದ ಮೇರೆಗೆ ಅಲೆಮಾರಿ ಹಾಗೂ ಅರೆ ಅಲೆಮಾರಿಗಳು ಇಲ್ಲಿಯ ಇಲ್ಲಿಯ ತಹಶೀಲ್ದಾರ್‌ ಕಚೇರಿ ಆವರಣದಲ್ಲಿ 11 ದಿನಗಳಿಂದ ನಡೆಸುತ್ತಿರುವ ಧರಣಿ ಅಂತ್ಯಗೊಳಿಸಿದ್ದಾರೆ.

ಗುರುವಾರ ರಾತ್ರಿ ಧರಣಿ ನಿರತರನ್ನು ಭೇಟಿ ಮಾಡಿದ ಜಿಲ್ಲಾಧಿಕಾರಿ, ಔರಾದ್ ಪಟ್ಟಣದ ಅಲೆಮಾರಿ ಹಾಗೂ ಅರೆ ಅಲೆಮಾರಿ ಜನರಿಗೆ ಸರ್ವೆ ನಂಬರ್‌ 205ರಲ್ಲಿ 2 ಎಕರೆ ಜಮೀನು ಮಂಜೂರು ಮಾಡಿ ಅಲ್ಲಿ ಆರು ತಿಂಗಳಲ್ಲಿ ಅಗತ್ಯ ಮೂಲ ಸೌಲಭ್ಯ ಕಲ್ಪಿಸಿ ನಿಯಮಾನುಸಾರ ನಿವೇಶನ ಹಂಚಿಕೆ ಮಾಡಲಾಗುವುದು ಎಂದು ಧರಣಿ ನಿರತರಿಗೆ ಹಿಂಬರಹ ಬರೆದುಕೊಟ್ಟ ಹಿನ್ನೆಲೆಯುಲ್ಲಿ ಧರಣಿ ಅಂತ್ಯಗೊಳಿಸಲಾಯಿತು.

ಉಪ ವಿಭಾಗಾಧಿಕಾರಿ ಮಹಮ್ಮದ್ ಶಕೀಲ್, ತಹಶೀಲ್ದಾರ್‌ ಮಹೇಶ ಪಾಟೀಲ, ಪ್ರತಿಭಟನೆ ನೇತೃತ್ವ ವಹಿಸಿ ರಾಹುಲ್ ಖಂದಾರೆ, ಸುಭಾಷ ಲಾಧಾ, ಪ್ರವೀಣ ಕಾರಂಜೆ, ಸಂತೋಷ ಸಿಂಧೆ ಮತ್ತಿತರರು ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.