
ಬಸವಕಲ್ಯಾಣ: ತಾಲ್ಲೂಕಿನ ಹಾರಕೂಡ ಹಿರೇಮಠದಲ್ಲಿ ಸೋಮವಾರ ಡೊಂಗರಗಾಂವದ ಮತೋಶ್ರೀ ಈರಮ್ಮ ವಡ್ಡನಕೇರಿ ಪ್ರತಿಷ್ಠಾನದಿಂದ ನಡೆದ ಕಾರ್ಯಕ್ರಮದಲ್ಲಿ ಚನ್ನವೀರ ಶಿವಾಚಾರ್ಯರು, ಕಲಬುರಗಿಯ ದಾಕ್ಷಾಯಣಿ ಅಪ್ಪ ಹಾಗೂ ಬಬಲಾದ ಗುರುಪಾದಲಿಂಗ ಶಿವಾಚಾರ್ಯರಿಗೆ ಹಾಗೂ ಇತರೆ ಸಾಧಕರಿಗೆ ಅವ್ವ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಬಳಿಕ ದಾಕ್ಷಾಯಣಿ ಅಪ್ಪ ಅವರು ಮಾತನಾಡಿ, ‘ತಾಯಿಗೆ ಸಮಾಜದಲ್ಲಿ ದೊಡ್ಡ ಗೌರವದ ಸ್ಥಾನವಿದೆ. ಕುಟುಂಬ ಮತ್ತು ಸಮಾಜದ ಬೆಳವಣಿಗೆಯಲ್ಲೂ ಅವರ ಪಾತ್ರ ಹಿರಿದು. ಆದ್ದರಿಂದ ಅವ್ವ ಹೆಸರಲ್ಲಿ ಪ್ರಶಸ್ತಿ ನೀಡುತ್ತಿರುವುದು ಪ್ರೇರಣೆ ನೀಡುವ ಕಾರ್ಯ’ ಎಂದರು.
ಪ್ರತಿಷ್ಠಾನದ ಅಧ್ಯಕ್ಷ ಶರಣಬಸಪ್ಪ ವಡ್ಡನಕೇರಿ, ಅಪ್ಪಾರಾವ ಅಕ್ಕೋಣಿ, ಬಸವರಾಜ ಕೊನೆಕ್ ಮಾತನಾಡಿದರು. ಸಾಹಿತಿ ವಿ.ಜಿ. ಪೂಜಾರ, ಶಿವಕುಮಾರ ಪಸಾರ, ಉದ್ಯಮಿ ಶರಣಮ್ಮ ಪಾಟೀಲ, ಗೋರೂರು ಪಂಕಜಾ ಅವರಿಗೂ ಅವ್ವ ಪ್ರಶಸ್ತಿ ನೀಡಲಾಯಿತು.
ಶಾಸಕ ಶರಣು ಸಲಗರ ಉದ್ಘಾಟಿಸಿದರು. ಮಲ್ಲಿಕಾರ್ಜುನ ಪಾಲಾಮೂರ, ಮೇಘರಾಜ ನಾಗರಾಳೆ, ಮಲ್ಲಿನಾಥ ಹಿರೇಮಠ, ಅಲ್ಲಮಪ್ರಭು ದೇಶಮುಖ ಉಪಸ್ಥಿತರಿದ್ದರು.
ಕಾರ್ತಿಕಸ್ವಾಮಿ ಯಲ್ಲದಗುಂಡಿ, ಶರಣಪ್ಪ ಜಮಾದಾರ ಸುಂಠಾಣ ಸಂಗೀತ ಪ್ರಸ್ತುತಪಡಿಸಿದರು. ಗ್ರಂಥಗಳನ್ನು ಬಿಡುಗಡೆಗೊಳಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.