ಬಸವಕಲ್ಯಾಣ: 'ಈ ಕ್ಷೇತ್ರದ ಶಾಸಕ ಆಗಿದ್ದಾಗಲೇ ನಿಧನರಾದ ಬಿ.ನಾರಾಯಣರಾವ್ ಅವರು ಅಭಿವೃದ್ಧಿಯ ಹರಿಕಾರ ಆಗಿದ್ದರು' ಎಂದು ಅವರ ಪತ್ನಿಯೂ ಆಗಿರುವ ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಾಲಾ ನಾರಾಯಣರಾವ್ ಹೇಳಿದರು.
ನಗರದ ಮುಡಬಿ ಕ್ರಾಸ್‌ನಲ್ಲಿರುವ ಬಿ.ನಾರಾಯಣರಾವ್ ಸಮಾಧಿ ಸ್ಥಳದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ನಾರಾಯಣರಾವ್ ಅವರ 4ನೇ ವರ್ಷದ ಪುಣ್ಯತಿಥಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
'ನಾರಾಯಣರಾವ್ ಕನಸು ನನಸಾಗಿಸಲು ಕ್ಷೇತ್ರದ ಜನ ನಮ್ಮ ಕುಟುಂಬದವರಿಗೆ ಸಹಕಾರ ನೀಡಬೇಕು' ಎಂದು ಮನವಿ ಮಾಡಿದರು.
ಮುಚಳಂಬ ಪ್ರಣವಾನಂದ ಸ್ವಾಮೀಜಿ ಮಾತನಾಡಿ, 'ನಾರಾಯಣರಾವ್ ಜನ ಸಾಮಾನ್ಯರ ಶಾಸಕ ಆಗಿದ್ದರು' ಎಂದರು. ಹುಲಸೂರ ಶಿವಾನಂದ ಸ್ವಾಮೀಜಿ ಮಾತನಾಡಿ, 'ನಾರಾಯಣರಾವ್ ಹೆಸರಲ್ಲಿ ಸ್ಮಾರಕ ನಿರ್ಮಾಣವಾಗಲಿ' ಎಂದರು.
ವಿಧಾನ ಪರಿಷತ್ ಮಾಜಿ ಸದಸ್ಯ ವಿಜಯಸಿಂಗ್ ಮುಖಂಡರಾದ ಅರ್ಜುನ ಕನಕ, ಅಮೃತ ಚಿಮಕೋಡ್, ಪಾರ್ವತಿ ಸೋನಾರೆ, ಮನೋಜಕುಮಾರ ಮಾಶೆಟ್ಟೆ, ನವಲಿಂಗಕುಮಾರ ಪಾಟೀಲ ಮಾತನಾಡಿದರು.
ಹಾರಕೂಡ ಚನ್ನವೀರ ಶಿವಾಚಾರ್ಯರು ಸಮಾಧಿ ಪೂಜೆ ನೆರವೇರಿಸಿದರು. ಅಂಬಿಗರ ಚೌಡಯ್ಯ ಪೀಠದ ರತ್ನಾಕಾಂತ ಸ್ವಾಮೀಜಿ, ಬೇಲೂರ ಪಂಚಾಕ್ಷರಿ ಸ್ವಾಮೀಜಿ, ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು, ಗೌರ ಬೀರಪ್ಪ ಮುತ್ಯಾ, ಕಾಂಗ್ರೆಸ್ ತಾಲ್ಲೂಕು ಅಧ್ಯಕ್ಷ ನೀಲಕಂಠ ರಾಠೋಡ, ತುಕಾರಾಮ ಮಲ್ಲಪ್ಪ, ಮನೋಹರ ಮೈಸೆ, ಗೌತಮ ನಾರಾಯಣರಾವ್, ರಾಹುಲ್, ಓಂಪ್ರಕಾಶ ಪಾಟೀಲ, ದಿಲೀಪ ಶಿಂಧೆ, ಲತಾ ಹಾರಕೂಡೆ, ಸಂತೋಷ ಗುತ್ತೇದಾರ, ಚಂದ್ರಕಾಂತ ಮೇತ್ರೆ, ತಾತೇರಾವ್ ಪಾಟೀಲ, ಗಿರೀಶ ತಾಂಬೋಳೆ, ಶರಣು ಆಲಗೂಡ ಪಾಲ್ಗೊಂಡಿದ್ದರು.
ಶಾಸಕ ಶರಣು ಸಲಗರ ಅವರೂ ಸಮಾಧಿ ಸ್ಥಳಕ್ಕೆ ಪ್ರತ್ಯೇಕವಾಗಿ ಭೇಟಿ ನೀಡಿ ಪುಷ್ಪಾರ್ಚನೆಗೈದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.