ಔರಾದ್: ಸ್ಮಶಾನ ಭೂಮಿ ಅತಿಕ್ರಮಣ ತೆರವಿಗಾಗಿ ಆಗ್ರಹಿಸಿ ವ್ಯಾಪಾರಿ ಸಂಘ ಇದೇ 29ರಂದು ಔರಾದ್ ಬಂದ್‌ಗೆ ಕರೆ ನೀಡಿದೆ.
ವಿವಿಧ ಸಂಘಟನೆಗಳು ನಡೆಸುತ್ತಿರುವ ಅನಿರ್ದಿಷ್ಟ ಧರಣಿ ಮಂಗಳವಾರ 5ನೇ ದಿನಕ್ಕೆ ಕಾಲಿಟ್ಟಿದ್ದು, ವ್ಯಾಪಾರಿ ಸಂಘದ ಮುಖಂಡರು ಬೆಂಬಲ ಸೂಚಿಸಿ ಪ್ರತಿಭಟನೆಯಲ್ಲಿ ಪಾಲ್ಗೊಂಡರು.
ಸ್ಮಶಾನ ಭೂಮಿ ಅತಿಕ್ರಮಣ ತೆರವು ಬೇಡಿಕೆ ಬಹಳ ಹಳೆಯದು. ಈ ವಿಷಯದಲ್ಲಿ ಹಿಂದೂಗಳು ಶಾಂತ ರೀತಿಯಿಂದ ಹೋರಾಟ ಮಾಡುತ್ತಾ ಬಂದ್ದಿದ್ದಾರೆ. ಆದರೆ, ಆಡಳಿತ ವರ್ಗ ಮಾತ್ರ ಬೇಡಿಕೆಯನ್ನು ಹಗುರುವಾಗಿ ಪರಿಗಣಿಸಿದ ಕಾರಣ ನೆನೆಗುದಿಗೆ ಬಿದ್ದಿದೆ. ಹೀಗಾಗಿ ಈಗ ನಾವು ಕೂಡ ಹೋರಾಟದಲ್ಲಿ ಪಾಲ್ಗೊಳ್ಳಲಿದ್ದೇವೆ ಎಂದು ವ್ಯಾಪಾರಿ ಸಂಘದ ಅಧ್ಯಕ್ಷ ಸಂದೀಪ ಮೀಸೆ ತಿಳಿಸಿದ್ದಾರೆ.
ಸಂಘದ ಉಪಾಧ್ಯಕ್ಷ ನಾಗರಾಜ ಉಪ್ಪೆ, ರೇವಣಪ್ಪ ಜಾಂತೆ, ಸಂಜು ನೌಬಾದೆ, ನಂದು ಜೀರ್ಗೆ, ಸಚಿನ್ ಗಿರಣೆ, ವಿಜಯಕುಮಾರ ನಿರ್ಮಳೆ, ಆನಂದ ಘುಳೆ, ಬಾಲರಾಜ ಯಂಡೆ, ಅಂಬರೇಶ್ ದೇಶಮುಖ ಇಂದಿನ ಧರಣಿಯಲ್ಲಿ ಪಾಲ್ಗೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.