ಬಸವಕಲ್ಯಾಣ: ‘ಗ್ರಾಮದಲ್ಲಿ ಬಾಬು ಜಗಜೀವನರಾಂ ಸಮುದಾಯ ಭವನ ನಿರ್ಮಾಣಕ್ಕೆ ಮಂಜೂರಾತಿ ದೊರೆತಿದ್ದು, ಅದಕ್ಕಾಗಿ ₹ 1 ಕೋಟಿ ಬಿಡುಗಡೆಗೊಳಿಸಿ ಕಾಮಗಾರಿ ಶೀಘ್ರ ಆರಂಭಿಸಲು ಪ್ರಯತ್ನಿಸುತ್ತೇನೆ’ ಎಂದು ವಿಧಾನಪರಿಷತ್ ಮಾಜಿ ಸದಸ್ಯ ವಿಜಯಸಿಂಗ್ ಭರವಸೆ ನೀಡಿದರು.
ತಾಲ್ಲೂಕಿನ ಉಮಾಪುರದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಅಣ್ಣಾಭಾವು ಸಾಠೆ ಜಯಂತಿಯಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
‘ಗ್ರಾಮದ ಮುಖಂಡರಲ್ಲಿ ಅಭಿವೃದ್ಧಿಯ ಬಗ್ಗೆ ಕಾಳಜಿ ಇದೆ. ವಿವಿಧ ಕಾರ್ಯಕ್ಕಾಗಿ ಸತತವಾಗಿ ಪ್ರಯತ್ನಿಸಿದ್ದಾರೆ. ಈ ರೀತಿಯ ಪ್ರಗತಿಪರ ಮನಸ್ಸು ಮತ್ತು ಜಾತಿ ಮತ್ತು ಧರ್ಮದ ಭೇದಭಾವವಿಲ್ಲದ ಒಗ್ಗಟ್ಟು ಇದ್ದರೆ ಗ್ರಾಮೀಣ ಭಾಗದ ವಿಕಾಸ ಸಾಧ್ಯ. ಅಣ್ಣಾಭಾವು ಹಾಗೂ ಶರಣರ, ಸಂತರ ಸಂದೇಶದ ಪಾಲನೆ ಆಗಲಿ’ ಎಂದರು.
ಬೌದ್ಧ ಧರ್ಮ ಪ್ರಚಾರಕ ಮಿಲಿಂದ್ ಗುರೂಜಿ, ಮುಖಂಡರಾದ ಸುಧಾಕರ ಸೂರ್ಯವಂಶಿ, ಸೂರ್ಯಕಾಂತ ಮದಕಟ್ಟಿ, ರಮೇಶ ಉಮಾಪುರೆ, ರಾಜೇಶ್ರೀ ಮೋರೆ, ವಿಷ್ಣು ಖಂಡಾಗಳೆ, ಅಜಯ ಸೂರ್ಯವಂಶಿ ಮಾತನಾಡಿದರು.
ಎಸ್.ಎಸ್.ಎಲ್.ಸಿ ಯಲ್ಲಿ ಶೇ 96ರಷ್ಟು ಅಂಕ ಪಡೆದ ರಾಘವೇಂದ್ರ ಅಶೋಕ ಢಗಳೆ ಮತ್ತಿತರರನ್ನು ಸನ್ಮಾನಿಸಲಾಯಿತು.
ಮುಖಂಡ ಸುಧಾಕರ ಕೊಳ್ಳೂರ್, ಕೆಪಿಸಿಸಿ ಕಾರ್ಮಿಕ ಘಟಕದ ರಾಜ್ಯ ಸಂಘಟನಾ ಕಾರ್ಯದರ್ಶಿ ಅಶೋಕ ಢಗಳೆ, ಜಿಲಾನಿಮಿಯ್ಯಾ ಕೊಹಿರ್, ಅಶೋಕ ಮದಾಳೆ, ಲಕ್ಷ್ಮಣ ಸಸ್ತಾಪುರೆ, ಜ್ಞಾನೋಬಾ ನಿಟ್ಟೂರೆ, ಸೂರ್ಯಕಾಂತ ಸಸಾಣೆ, ಸುಧಾಕರರಾವ್, ವಿಠಲ್ ಮೇಡೆ, ಸಂತೋಷ ಢಗಳೆ, ಶ್ರೀನಿವಾಸ ಸಾಸೂಳೆ, ನಾಮದೇವ ಸಾಸೂಳೆ ಮತ್ತಿತರರು ಉಪಸ್ಥಿತರಿದ್ದರು.
ಅಣ್ಣಾಭಾವು ಭಾವಚಿತ್ರದ ಮೆರವಣಿಗೆ ವಿವಿಧ ಕ್ಷೇತ್ರದ ಸಾಧಕರ ಸನ್ಮಾನ ಅಭಿವೃದ್ಧಿಗೆ ಮುಖಂಡರ ಪ್ರಯತ್ನ ಶ್ಲಾಘನೆ
ಗ್ರಾಮವು ಐತಿಹಾಸಿಕ ಸ್ಥಳವಾಗಿದ್ದು ಇಲ್ಲಿ ಪ್ರವಾಸಿ ತಾಣಗಳಿರುವುದರಿಂದ ಹೈಮಾಸ್ಟ್ ದೀಪ ಅಳವಡಿಕೆ ಹಾಗೂ ಸಿಸಿ ರಸ್ತೆ ನಿರ್ಮಿಸಲು ಅನುದಾನ ಒದಗಿಸಿ ಕೊಡಬೇಕುಬಬಲು ಶೇಖ್ ಗ್ರಾಮ ಪಂಚಾಯಿತಿ ಸದಸ್ಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.