ADVERTISEMENT

ಬಸವತತ್ವಕ್ಕೆ ಬೇಲಿ, ಕಲ್ಯಾಣ ಬಂದ್: ಶಿವಮೂರ್ತಿ ಮುರುಘರಾಜೇಂದ್ರ ಶರಣರ ವಿಷಾದ

ಚಿತ್ರದುರ್ಗ ಶಿವಮೂರ್ತಿ ಮುರುಘರಾಜೇಂದ್ರ ಶರಣರ ವಿಷಾದ

​ಪ್ರಜಾವಾಣಿ ವಾರ್ತೆ
Published 25 ಜನವರಿ 2021, 20:19 IST
Last Updated 25 ಜನವರಿ 2021, 20:19 IST
ಶಿವಮೂರ್ತಿ ಮುರುಘಾ ಶರಣರು
ಶಿವಮೂರ್ತಿ ಮುರುಘಾ ಶರಣರು   

ಬಸವಕಲ್ಯಾಣ (ಬೀದರ್‌ ಜಿಲ್ಲೆ): ‘ಜಾತಿ ಹೆಸರಲ್ಲಿ ಬಸವತತ್ವಕ್ಕೆ ಬೇಲಿ ಹಾಕಲಾಗಿದೆ. ಅಂದು ಎಲ್ಲರನ್ನೂ ಕೈಬೀಸಿ ಕರೆಯುತ್ತಿದ್ದ ಕಲ್ಯಾಣ (ಬಸವ ಕಲ್ಯಾಣ) ಇಂದು ಬಂದ್ ಆಗಿದೆ’ ಎಂದು ಚಿತ್ರದುರ್ಗ ಶಿವಮೂರ್ತಿ ಮುರುಘಾ ರಾಜೇಂದ್ರ ಶರಣರು ವಿಷಾದ ವ್ಯಕ್ತಪಡಿಸಿದರು.

ಸಮೀಪದ ಹುಲಸೂರಿನ ಗುರು ಬಸವೇಶ್ವರ ಸಂಸ್ಥಾನ ಮಠದಲ್ಲಿ ಸೋಮವಾರ ಆಯೋಜಿಸಿದ್ದ
ಬಸವ ಕುಮಾರ ಶಿವಯೋಗಿಗಳ 45ನೇ ಸ್ಮರಣೋತ್ಸವ ಸಮಾರೋಪದಲ್ಲಿ ಅವರು ಮಾತನಾಡಿದರು.

‘ಬೇಲಿ ಹಾಕಿದರೆ ಬಸವತತ್ವ ಉಳಿಯುವುದಿಲ್ಲ. ಬೇಲಿ ಬೇಕೋ ಬಸವತತ್ವ ಬೇಕೋ ಎಂಬುದನ್ನು ನಿರ್ಧರಿಸಬೇಕಾಗಿದೆ. ನಾನೂ ಬಸವಕಲ್ಯಾಣದ ವಿಕಾಸಕ್ಕಾಗಿ ಬೆವರು ಸುರಿಸಿದ್ದೇನೆ’ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.