ADVERTISEMENT

ಬೀದರ್: ರಸ್ತೆ ದುರಸ್ತಿಗೆ ವಾಣಿಜ್ಯ ಸಂಸ್ಥೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2021, 14:37 IST
Last Updated 4 ಆಗಸ್ಟ್ 2021, 14:37 IST

ಬೀದರ್: ನಗರದಲ್ಲಿ ಹಾಳಾಗಿರುವ ರಸ್ತೆಗಳನ್ನು ದುರಸ್ತಿಪಡಿಸಬೇಕು ಎಂದು ಬೀದರ್ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಒತ್ತಾಯಿಸಿದೆ.

ಸಂಸ್ಥೆಯ ಅಧ್ಯಕ್ಷ ಬಿ.ಜಿ. ಶೆಟಕಾರ ನೇತೃತ್ವದ ನಿಯೋಗವು ನಗರದಲ್ಲಿ ಮಂಗಳವಾರ ನಗರಸಭೆ ಆಯುಕ್ತರನ್ನು ಭೇಟಿ ಮಾಡಿ ವಿವಿಧ ಸಮಸ್ಯೆಗಳನ್ನು ಶೀಘ್ರ ಪರಿಹರಿಸಲು ಒತ್ತಾಯಿಸಿತು.

ಒಳಚರಂಡಿ ನಿರ್ಮಾಣ, ದಿನದ 24 ಗಂಟೆ ನಿರಂತರ ಕುಡಿಯುವ ನೀರು ಮೊದಲಾದ ಕಾಮಗಾರಿಗಳ ಬಗ್ಗೆ ಆಯುಕ್ತರ ಗಮನ ಸೆಳೆಯಿತು.
ಆದಷ್ಟು ಬೇಗ ಎಲ್ಲ ಸಮಸ್ಯೆಗಳನ್ನು ಬಗೆಹರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಆಯುಕ್ತರು ಭರವಸೆ ನೀಡಿದರು.

ADVERTISEMENT

ಸಂಸ್ಥೆ ಉಪಾಧ್ಯಕ್ಷರಾದ ಸೋಮಶೇಖರ ಪಾಟೀಲ, ಡಾ. ರಜನೀಶ್ ವಾಲಿ, ಪ್ರಧಾನ ಕಾರ್ಯದರ್ಶಿ ಡಾ. ವೀರೇಂದ್ರ ಶಾಸ್ತ್ರಿ, ಜಂಟಿ ಕಾರ್ಯದರ್ಶಿ ರಾಜಶೇಖರ ಮಿಟಕಾರಿ, ಕೋಶಾಧ್ಯಕ್ಷ ಮಡಿವಾಳಪ್ಪ ಗಂಗಶೆಟ್ಟಿ, ಆಡಳಿತ ಮಂಡಳಿ ಸದಸ್ಯರಾದ ಡಿ.ವಿ. ಸಿಂದೋಲ್, ಕಂಟೆಪ್ಪ ಪಾಟೀಲ, ವೀರಕುಮಾರ ಮಜಗೆ, ರಮೇಶ ದುಕಾನದಾರ್, ಪಿ. ನಾರಾಯಣರಾವ್, ಸುನೀಲ್ ಮೊಟ್ಟಿ ಹಾಗೂ ಅನಿಲ್ ಆಣದೂರಕರ್ ನಿಯೋಗದಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.