ADVERTISEMENT

17 ರಿಂದ ಭದ್ರೇಶ್ವರ ಜಾತ್ರೆ: ಶಿವಕುಮಾರ ಸ್ವಾಮಿ

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2022, 14:48 IST
Last Updated 1 ಏಪ್ರಿಲ್ 2022, 14:48 IST
ಬೀದರ್ ತಾಲ್ಲೂಕಿನ ಬಾವಗಿ ಗ್ರಾಮದ ಗುರು ಭದ್ರೇಶ್ವರ ಮಠದಲ್ಲಿ ಗುರು ಭದ್ರೇಶ್ವರ ಜಾತ್ರೆಯ ಪೋಸ್ಟರ್ ಬಿಡುಗಡೆ ಮಾಡಲಾಯಿತು
ಬೀದರ್ ತಾಲ್ಲೂಕಿನ ಬಾವಗಿ ಗ್ರಾಮದ ಗುರು ಭದ್ರೇಶ್ವರ ಮಠದಲ್ಲಿ ಗುರು ಭದ್ರೇಶ್ವರ ಜಾತ್ರೆಯ ಪೋಸ್ಟರ್ ಬಿಡುಗಡೆ ಮಾಡಲಾಯಿತು   

ಜನವಾಡ: ಬೀದರ್ ತಾಲ್ಲೂಕಿನ ಬಾವಗಿ ಗ್ರಾಮದಲ್ಲಿ ಏಪ್ರಿಲ್ 17, 18 ಹಾಗೂ 19 ರಂದು ಗುರು ಭದ್ರೇಶ್ವರ ಜಾತ್ರೆ ನಡೆಯಲಿದೆ ಎಂದು ಗುರು ಭದ್ರೇಶ್ವರ ಮಠದ ಶಿವಕುಮಾರ ಸ್ವಾಮಿ ಹೇಳಿದರು.

ಬಾವಗಿ ಗ್ರಾಮದ ಭದ್ರೇಶ್ವರ ಮಠದಲ್ಲಿ ಜಾತ್ರೆಯ ಪೋಸ್ಟರ್ ಬಿಡುಗಡೆ ಮಾಡಿ ಅವರು ಮಾತನಾಡಿದರು.

ಎರಡು ವರ್ಷ ಕೋವಿಡ್ ಕಾರಣ ಜಾತ್ರೆ ನಡೆದಿಲ್ಲ. ಈ ವರ್ಷ ಅದ್ಧೂರಿಯಾಗಿ ನಡೆಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.
ಗ್ರಾಮ ಪಂಚಾಯಿತಿ ಸದಸ್ಯ ಶಾಂತವೀರ ಹಜ್ಜರಗಿ, ಕಾಂಗ್ರೆಸ್ ಯುವ ಮುಖಂಡ ಲೋಕೇಶ ಕನಶೆಟ್ಟಿ, ಚಂದ್ರಕಾಂತ ಚಿದ್ರಿ, ರಾಜಶೇಖರ ಪಟ್ಟೇದ ಟೆಂಗಳಿ, ಪ್ರಶಾಂತ, ಸುನೀಲಕುಮಾರ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.