ADVERTISEMENT

ಭಾಲ್ಕಿ: ಬಿಜೆಪಿ ಮಂಡಲ ಪದಾಧಿಕಾರಿಗಳ ನೇಮಕ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2026, 3:16 IST
Last Updated 2 ಫೆಬ್ರುವರಿ 2026, 3:16 IST
ವೀರಣ್ಣ ಕಾರಬಾರಿ
ವೀರಣ್ಣ ಕಾರಬಾರಿ   

ಭಾಲ್ಕಿ: ತಾಲ್ಲೂಕಿನ ಬಿಜೆಪಿ ಮಂಡಲಕ್ಕೆ ಜಿಲ್ಲಾಧ್ಯಕ್ಷರ ಆದೇಶದ ಮೇರೆಗೆ ವಿವಿಧ ಪದಾಧಿಕಾರಿಗಳನ್ನು ನೇಮಿಸಿ ಜವಾಬ್ದಾರಿ ಹಂಚಿಕೆ ಮಾಡಲಾಗಿದೆ ಎಂದು ತಾಲ್ಲೂಕು ಅಧ್ಯಕ್ಷ ವೀರಣ್ಣ ಕಾರಬಾರಿ ತಿಳಿಸಿದ್ದಾರೆ.

ಎಂಟು ಜನರನ್ನು ಉಪಾಧ್ಯಕ್ಷರಾಗಿ, ಇಬ್ಬರು ಪ್ರಧಾನ ಕಾರ್ಯದರ್ಶಿ, ಎಂಟು ಜನ ಕಾರ್ಯದರ್ಶಿ ಮತ್ತು ಒಬ್ಬರನ್ನು ಖಜಾಂಚಿಯನ್ನಾಗಿ ನೇಮಿಸಲಾಗಿದೆ.

ಪದಾಧಿಕಾರಿಗಳ ವಿವರ: ಸಂಗಮೇಶ ಕಾರಾಮುಂಗೆ, ಪಾಂಡುರಂಗ ಕನಸೆ, ಗಂಗಾಧರ ಹೊಸಳ್ಳಿ, ಉದ್ಧವ ಕೊಟಮಾಳೆ, ಸಿದ್ದು ಕಾಡಾದಿ, ಅನರಾಜ ಕುಂದೆ, ರಾಜಶೇಖರ ಬಿರಾದಾರ್ ಮತ್ತು ಪಂಡರಿ ಮೇತ್ರೆ ಅವರನ್ನು ಉಪಾಧ್ಯಕ್ಷರನ್ನಾಗಿ ನೇಮಿಸಲಾಗಿದೆ. ರೇವಣಿಸಿದ್ದ ಜಾಡರ್, ಡಾ.ಮಹೇಶ ಭಾಲ್ಕೆ ಅವರನ್ನು ಪ್ರಧಾನ ಕಾರ್ಯದರ್ಶಿಯಾಗಿ ನೇಮಿಸಲಾಗಿದೆ. ಶಂಕರರಾವ್ ಬಿರಾದಾರ, ದೇವಾನಂದ ಬಗದೂರೆ, ಚಂದ್ರಕಾಂತ ಬಿಗೆ, ಶೀತಲ ಕಾಂಬಳೆ, ವೈಶಾಲಿ ಬಿರಾದಾರ, ರೇಷ್ಮಾ ತಮಾಸಂಗೆ, ಮಹೇಶ ಸ್ವಾಮಿ, ಗೋವಿಂದ ಪಾಟೀಲ ಅವರನ್ನು ಕಾರ್ಯದರ್ಶಿಯಾಗಿ ಮತ್ತು ಕರಸಬಪ್ಪ ಅವರನ್ನು ಖಜಾಂಚಿಯನ್ನಾಗಿ ನೇಮಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.