ಭಾಲ್ಕಿ: ತಾಲ್ಲೂಕಿನಲ್ಲಿ 2024-25ನೇ ಸಾಲಿನ ಕೃಷಿ ಇಲಾಖೆಯ ಕೃಷಿ ಯಂತ್ರೋಪಕರಣ ಯೋಜನೆಯಡಿ ರೈತರಿಗೆ ಯಂತ್ರೋಪಕರಣಗಳು ವಿತರಿಸಲು ಅರ್ಜಿ ಆಹ್ವಾನಿಸಲಾಗಿದೆ ಎಂದು ಸಹಾಯಕ ಕೃಷಿ ನಿರ್ದೇಶಕ ಪಿ.ಎಂ.ಮಲ್ಲಿಕಾರ್ಜುನ ತಿಳಿಸಿದ್ದಾರೆ.
ಆ.8ರ ಒಳಗೆ ಸಂಬಂಧಿತ ರೈತ ಸಂಪರ್ಕ ಕೇಂದ್ರದಲ್ಲಿ ಅರ್ಜಿ ಸಲ್ಲಿಸಬೇಕು. ನೇಗಿಲು, ರೋಟಾವೇಟರ್, ಕಲ್ಟಿವೇಟರ್, ಬಿತ್ತುವ ಕೂರಿಗೆ, ಹುಲ್ಲು ಕತ್ತರಿಸುವ ಯಂತ್ರ, ಡಿಸೇಲ್ ಎಂಜಿನ್ ಮತ್ತು ರಾಶಿ ಮಾಡುವ ಯಂತ್ರ ಇತ್ಯಾದಿ ಯಂತ್ರಗಳನ್ನು ಸಾಮಾನ್ಯ ವರ್ಗದ ರೈತರಿಗೆ ಶೇ 50, ಎಸ್‌ಸಿ, ಎಸ್‌ಟಿ ರೈತರಿಗೆ ಶೇ 901ರಷ್ಟು ಸಹಾಯಧನದಲ್ಲಿ ನಿಯಮಾನುಸಾರವಾಗಿ ಆಯ್ಕೆಯಾದ ಫಲಾನುಭವಿಗಳಿಗೆ ವಿತರಿಸಲಾಗುವುದು. ಹೆಚ್ಚಿನ ಮಾಹಿತಿಗಾಗಿ ಸಂಬಂಧಪಟ್ಟ ರೈತ ಸಂಪರ್ಕ ಕೇಂದ್ರಗಳಿಗೆ ಸಂಪರ್ಕಿಸಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.