
ಪ್ರಜಾವಾಣಿ ವಾರ್ತೆಔರಾದ್: ಬೀದರ್-ನಾಂದೇಡ್ ಮುಖ್ಯ ರಸ್ತೆ ವನಮಾರಪಳ್ಳಿ ಬಳಿ ಆಟೊ ಡಿಕ್ಕಿ ಹೊಡೆದು ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ.
ಮೃತರು ಇಟಗ್ಯಾಳ ಗ್ರಾಮದ ರಾಮ (39) ಎಂದು ಗುರುತಿಸಲಾಗಿದೆ. ಡಿ. 17ರಂದು ಈ ಘಟನೆ ನಡೆದಿದೆ.
ಮೃತರ ಪತ್ನಿ ಚಂದ್ರಕಲಾ ಪೊಲೀಸರಿಗೆ ದೂರು ನೀಡಿದ್ದು, ’ವನಮಾರಪಳ್ಳಿ ಬಳಿ ನನ್ನ ಗಂಡ ನಡೆದುಕೊಂಡು ಹೋಗುವಾಗ ಆಟೊ ಡಿಕ್ಕಿ ಹೊಡೆದು ಮೃತಪಟ್ಟಿದ್ದಾರೆ’ ಎಂದು ತಿಳಿಸಿದ್ದಾರೆ. ಈ ಕುರಿತು ಸೋಮವಾರ ಔರಾದ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.