
ಶಿಲ್ಪಾ ಶರ್ಮಾ
ಬೀದರ್: ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರು ನಗರದ ಅಲಿಯಾಬಾದ್ ಸಮೀಪದ ‘ಕರೇಜ್’ಗೆ ಭೇಟಿ ನೀಡಿ ಪರಿಶೀಲಿಸಿದರು.
ಖಾಸಗಿಯವರು ಅಭಿವೃದ್ಧಿ ಕಾಮಗಾರಿಗೆ ನೆಲ ಅಗೆದಿರುವುದನ್ನು ಪರಿಶೀಲಿಸಿ ಮಾಹಿತಿ ಪಡೆದರು. ‘ಕರೇಜ್ ಮೌತ್’ ಹಾಗೂ ಅದರ ಸುತ್ತಮುತ್ತ ಯಾವುದೇ ಕಾಮಗಾರಿಗಳು ನಡೆಯದಂತೆ ನೋಡಿಕೊಳ್ಳಬೇಕೆಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಕರೇಜ್ ಸಂರಕ್ಷಣೆಗೆ ಸಂಬಂಧಿಸಿದಂತೆ ಚರ್ಚಿಸಲು ಜಿಲ್ಲಾಧಿಕಾರಿ ಅವರು ಶುಕ್ರವಾರ (ಜ.16) ಸಭೆ ಕರೆದಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತರೂ ಆದ ರಾಜ್ಯ ವನ್ಯಜೀವಿ ಮಂಡಳಿ ಸದಸ್ಯ ವಿನಯ್ ಕುಮಾರ್ ಮಾಳಗೆ ತಿಳಿಸಿದ್ದಾರೆ.
‘ನೆಲದಾಳದ ವಿಸ್ಮಯ ಮಾರ್ಗಕ್ಕೆ ಹಾನಿ’, ಕರೇಜ್ ಪರಿಧಿಯಲ್ಲಿ ಕಾಮಗಾರಿ ಅವ್ಯಾಹತ–ಜಿಲ್ಲಾಡಳಿತ ಮೌನ, ಶೀರ್ಷಿಕೆಯಡಿ ‘ಪ್ರಜಾವಾಣಿ’ ಬುಧವಾರ (ಜ.14) ವರದಿ ಪ್ರಕಟಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.