ADVERTISEMENT

ಬೀದರ್‌ ದರೋಡೆ ಖದೀಮರು ಇವರೇ ನೋಡಿ; 1ತಿಂಗಳ ಬಳಿಕ ಫೋಟೊ ಬಿಡುಗಡೆ ಮಾಡಿದ ಪೊಲೀಸರು!

ದರೋಡೆ ಪ್ರಕರಣದ ಇಬ್ಬರು ದರೋಡೆಕೋರರ ಗುರುತು ಪತ್ತೆ ಹಚ್ಚುವಲ್ಲಿ ಬೀದರ್‌ ಜಿಲ್ಲಾ ಪೊಲೀಸರು ಯಶಸ್ವಿಯಾಗಿದ್ದಾರೆ.

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2025, 9:03 IST
Last Updated 15 ಫೆಬ್ರುವರಿ 2025, 9:03 IST
<div class="paragraphs"><p>ಬೀದರ್‌ ದರೋಡೆ ಖದೀಮರು ಇವರೇ ನೋಡಿ; 1ತಿಂಗಳ ಬಳಿಕ ಫೋಟೊ ಬಿಡುಗಡೆ ಮಾಡಿದ ಪೊಲೀಸರು!</p></div>

ಬೀದರ್‌ ದರೋಡೆ ಖದೀಮರು ಇವರೇ ನೋಡಿ; 1ತಿಂಗಳ ಬಳಿಕ ಫೋಟೊ ಬಿಡುಗಡೆ ಮಾಡಿದ ಪೊಲೀಸರು!

   

ಬೀದರ್‌: ನಗರದ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ (ಎಸ್‌ಬಿಐ) ಮುಖ್ಯ ಕಚೇರಿ ಎದುರು ನಡೆದ ದರೋಡೆ ಪ್ರಕರಣದ ಇಬ್ಬರು ದರೋಡೆಕೋರರ ಗುರುತು ಪತ್ತೆ ಹಚ್ಚುವಲ್ಲಿ ಬೀದರ್‌ ಜಿಲ್ಲಾ ಪೊಲೀಸರು ಯಶಸ್ವಿಯಾಗಿದ್ದಾರೆ.

ಬಿಹಾರ ರಾಜ್ಯದ ವೈಶಾಲಿ ಜಿಲ್ಲೆಯ ಫತೇಪುರ ಫುಲ್‌ವರಿಯಾ ನಿವಾಸಿ ಅಮನ್‌ ಕುಮಾರ್‌ ರಾಜಕಿಶೋರ್‌ ಸಿಂಗ್‌ ಹಾಗೂ ಅದೇ ಜಿಲ್ಲೆಯ ಮಹಿಸೋರ್‌ ನಿವಾಸಿ ಅಲೋಕ್‌ ಕುಮಾರ್‌ ಅಲಿಯಾಸ್‌ ಅಶುತೋಷ್‌ ಶತ್ರುಘ್ನ ಪ್ರಸಾದ್‌ ಸಿಂಗ್‌ ಕೃತ್ಯ ಎಸಗಿದವರು ಎಂದು ಗುರುತಿಸಿದ್ದಾರೆ.

ADVERTISEMENT

ಇಬ್ಬರೂ ಉತ್ತರ ಪ್ರದೇಶದ ಮಿರ್ಜಾಪುರ ಸೇರಿದಂತೆ ಹಲವೆಡೆ ಈ ರೀತಿಯ ದರೋಡೆ ಪ್ರಕರಣಗಳಲ್ಲಿ ಭಾಗಿಯಾಗಿದ್ದರು ಎಂಬ ಮಾಹಿತಿ ಪೊಲೀಸರಿಗೆ ಲಭ್ಯವಾಗಿದೆ. ಆರೋಪಿಗಳಿಬ್ಬರ ಕುಟುಂಬದವರನ್ನೂ ವಿಚಾರಣೆಗೆ ಒಳಪಡಿಸಿದ್ದಾರೆ ಎಂದು ಖಚಿತ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ಇಬ್ಬರ ಗುರುತು ಪತ್ತೆಯಾದ ನಂತರ ಬೀದರ್‌ ಜಿಲ್ಲಾ ಪೊಲೀಸರು ಬಿಹಾರದ ಹಲವೆಡೆ ‘ಬೇಕಾಗಿದ್ದಾರೆ’ ಎಂದು ಪೋಸ್ಟರ್‌ ಅಂಟಿಸಿದ್ದಾರೆ. ಇಬ್ಬರ ಬಗ್ಗೆ ಮಾಹಿತಿ ಕೊಟ್ಟವರಿಗೆ ₹5 ಲಕ್ಷ ನಗದು ಬಹುಮಾನ ಕೂಡ ಘೋಷಿಸಿದ್ದಾರೆ ಎಂದು ತಿಳಿದು ಬಂದಿದೆ.

ಜನವರಿ 16ರಂದು ಬ್ಯಾಂಕಿನಿಂದ ಎಟಿಎಂಗಳಿಗೆ ಜಮೆ ಮಾಡಲು ಹಣ ಕೊಂಡೊಯ್ಯುತ್ತಿದ್ದ ಎಸ್‌ಬಿಐನ ಸಿಎಂಎಸ್‌ ಕಂಪನಿಯ ಇಬ್ಬರು ನೌಕರರ ಮೇಲೆ ಗುಂಡಿನ ದಾಳಿ ನಡೆಸಿ, ₹83 ಲಕ್ಷ ನಗದು ಹಣವಿದ್ದ ಟ್ರಂಕ್‌ನೊಂದಿಗೆ ಬೈಕ್‌ ಮೇಲೆ ಪರಾರಿಯಾಗಿದ್ದರು. ಘಟನೆಯಲ್ಲಿ ಸಿಎಂಎಸ್‌ ಕಂಪನಿಯ ಕ್ಯಾಶ್‌ ಕಸ್ಟೋಡಿಯನ್‌ ಗಿರಿ ವೆಂಕಟೇಶ ಸ್ಥಳದಲ್ಲೇ ಮೃತಪಟ್ಟಿದ್ದರು. ಶಿವಕುಮಾರ ಎಂಬುವರು ಗಂಭೀರವಾಗಿ ಗಾಯಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.