ADVERTISEMENT

ದಾಸೋಹ ತತ್ವದಿಂದ ಕಾರ್ಯನಿರ್ವಹಿಸಿ: ಗುರುಬಸವ ಪಟ್ಟದ್ದೇವರು

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2022, 4:01 IST
Last Updated 20 ಸೆಪ್ಟೆಂಬರ್ 2022, 4:01 IST
ಭಾಲ್ಕಿಯ ಬಾಲಾಜಿ ಮಂದಿರದಲ್ಲಿ ನಡೆದ ವಾರ್ಷಿಕೋತ್ಸವಕ್ಕೆ ಸಂಘದ ರಾಜ್ಯ ಘಟಕದ ಅಧ್ಯಕ್ಷ ಶಿವರಾಜ ಕಪಲಾಪುರೆ ಚಾಲನೆ ನೀಡಿದರು
ಭಾಲ್ಕಿಯ ಬಾಲಾಜಿ ಮಂದಿರದಲ್ಲಿ ನಡೆದ ವಾರ್ಷಿಕೋತ್ಸವಕ್ಕೆ ಸಂಘದ ರಾಜ್ಯ ಘಟಕದ ಅಧ್ಯಕ್ಷ ಶಿವರಾಜ ಕಪಲಾಪುರೆ ಚಾಲನೆ ನೀಡಿದರು   

ಭಾಲ್ಕಿ: ‘ಲಿಂಗಾಯತ ನೌಕರರು ಸದಾ ಕಾಯಕ, ದಾಸೋಹ ತತ್ವದಲ್ಲಿ ಕಾರ್ಯನಿರ್ವಹಿಸಬೇಕು’ ಎಂದು ಹಿರೇಮಠದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ಹೇಳಿದರು.

ಪಟ್ಟಣದ ಬಾಲಾಜಿ ಮಂದಿರದಲ್ಲಿ ನಡೆದ ಕರ್ನಾಟಕ ರಾಜ್ಯ ಲಿಂಗಾಯತ ನೌಕರರ ಸಂಘದ 3ನೇ ವಾರ್ಷಿಕ ಮಹಾಸಭೆಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಸಂಘಟನೆಯಲ್ಲಿ ಶಕ್ತಿ ಇದೆ ಎಂದರು. ಲಿಂಗಾಯತ ನೌಕರರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಶಿವರಾಜ ಕಪಲಾಪುರೆ, ತಾಲ್ಲೂಕು ಘಟಕದ ಅಧ್ಯಕ್ಷ ಬಸವರಾಜ ಬಡದಾಳೆ ಹಾಗೂ ಮಲ್ಲಿಕಾರ್ಜುನ ಪಾಟೀಲ ಮಾತನಾಡಿದರು.

ADVERTISEMENT

ಮಲ್ಲಿಕಾರ್ಜುನ ಹಲ್ಮಂಡಗೆ, ನಾಗಭೂಷಣ ಮಾಮಡಿ, ರಾಜೆಪ್ಪ ಪಾಟೀಲ, ಸೂರ್ಯಕಾಂತ ಸುಂಟೆ, ಅಶೋಕ ತಂಬೋಳೆ, ಸುನಿಲ್‌ ಬಿರಾದಾರ, ಚಂದ್ರಕಾಂತ ಬಿರಾದಾರ, ಮಲ್ಲಮ್ಮಾ ಆರ್. ಪಾಟೀಲ, ಕೀರ್ತಿಲತಾ ಹೋಸಾಳೆ ಸೇರಿದಂತೆ 2022ನೇ ಸಾಲಿನಲ್ಲಿ ನಿವೃತ್ತರಾದ, ಪದೋನ್ನತಿ ಹೊಂದಿದ, ನೂತನವಾಗಿ ಆಯ್ಕೆಯಾದ ಇಸಿಒ, ಸಿಆರ್‌ಪಿಗಳನ್ನು ಸನ್ಮಾನಿಸಿ, ಗೌರವಿಸಲಾಯಿತು. ಶರಣಪ್ಪ, ಮಲ್ಲಿನಾಥ, ಶಿವಕುಮಾರ, ಶಶಿಧರ ಕೊಸಂಬೆ ಹಾಗೂ ಸೋಮನಾಥ ಗೋರ್ಟಾ ಇದ್ದರು. ಸುನಿತಾ ಮಮ್ಮ ವಚನಗೀತೆ ಹಾಡಿದರು. ಬಸವರಾಜ ದಾನಾ ಸ್ವಾಗತಿಸಿದರು. ಸಂತೋಷ ವಾಡೆ ನಿರೂಪಿಸಿದರು. ಬಾಲಾಜಿ ಬೈರಾಗಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.