ADVERTISEMENT

ಬೀದರ್: ಗುರುದೇವಾಶ್ರಮ ರಜತ ಮಹೋತ್ಸವ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2026, 5:31 IST
Last Updated 21 ಫೆಬ್ರುವರಿ 2026, 5:31 IST
ಬೀದರ್‌ನ ಗುರುದೇವಾಶ್ರಮದ ರಜತ ಮಹೋತ್ಸವದ ಸಮಾರೋಪ ಸಮಾರಂಭವನ್ನು ಸಿದ್ಧಾರೂಢ ಮಠದ ಪೀಠಾಧಿಪತಿ ಶಿವಕುಮಾರ ಸ್ವಾಮೀಜಿ ಉದ್ಘಾಟಿಸಿದರು
ಬೀದರ್‌ನ ಗುರುದೇವಾಶ್ರಮದ ರಜತ ಮಹೋತ್ಸವದ ಸಮಾರೋಪ ಸಮಾರಂಭವನ್ನು ಸಿದ್ಧಾರೂಢ ಮಠದ ಪೀಠಾಧಿಪತಿ ಶಿವಕುಮಾರ ಸ್ವಾಮೀಜಿ ಉದ್ಘಾಟಿಸಿದರು    

ಬೀದರ್: ನಗರದ ಸಿದ್ಧಾರೂಢ ಮಠದ ಮುಂಭಾಗದ ಗುರುದೇವಾಶ್ರಮದಲ್ಲಿ ಹಮ್ಮಿಕೊಂಡಿದ್ದ ಆಶ್ರಮದ ರಜತ ಮಹೋತ್ಸವ, ಸದ್ಗುರು ಸಚ್ಚಿದಾನಂದ ಸ್ವಾಮೀಜಿ ಅವರ 90ನೇ ಜಯಂತಿ ಹಾಗೂ 108 ಮನೆಗಳಲ್ಲಿ ಸುವಿಚಾರ ಚಿಂತನ ಕಾರ್ಯಕ್ರಮ ಗುರುವಾರ ಸಮಾರೋಪಗೊಂಡಿತು.

ಸಾನ್ನಿಧ್ಯ ವಹಿಸಿ ಮಾತನಾಡಿದ ಇಂಚಲದ ಶಿವಾನಂದ ಭಾರತಿ ಸ್ವಾಮೀಜಿ, 84 ಲಕ್ಷ ಜೀವ ರಾಶಿಗಳಲ್ಲೇ ಮಾನವ ಜನ್ಮ ಶ್ರೇಷ್ಠವಾದದ್ದು. ಅದನ್ನು ವ್ಯರ್ಥ ಮಾಡಿಕೊಳ್ಳಬಾರದು. ಆಧ್ಯಾತ್ಮ ಜ್ಞಾನ ಇಲ್ಲದ ವ್ಯಕ್ತಿಯ ಬದುಕು ಪಶುವಿನಂತೆ ಆಗುತ್ತದೆ. ಆತ ಅರಾಜಕತೆ ಉಂಟು ಮಾಡುತ್ತಾನೆ. ಹೀಗೆ ಆಗಬಾರದೆಂದರೆ, ಆಧ್ಯಾತ್ಮದ ಕಡೆಗೆ ಸಾಗಬೇಕು. ಗುರುವಿನ ಸಂದೇಶ ಆಲಿಸಬೇಕು ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಸಿದ್ಧಾರೂಢ ಸ್ವಾಮೀಜಿ ಅವರ ಪ್ರಚಾರ ಮಾಡಿದವರು ಸಚ್ಚಿದಾನಂದ ಸ್ವಾಮೀಜಿ ಎಂದು ಸಿದ್ಧಾರೂಢ ಮಠದ ಪೀಠಾಧಿಪತಿ ಶಿವಕುಮಾರ ಸ್ವಾಮೀಜಿ ಹೇಳಿದರು.

ADVERTISEMENT

ಜಿಲ್ಲೆಯಲ್ಲಿ ಸಚ್ಚಿದಾನಂದ ಸ್ವಾಮೀಜಿ ಅವರ ಶಿಷ್ಯ ಬಳಗ ಹೆಚ್ಚಿದೆ. ಅವರು ಹಗಲಿರುಳು ಪರಿಶ್ರಮ ಪಟ್ಟು ಗುರು ಸಂಪ್ರದಾಯ ಬೆಳೆಸಿದ್ದರಿಂದಲೇ ವೇದಾಂತ ಪರಂಪರೆ ಬೆಳೆದಿದೆ ಎಂದು ತಿಳಿಸಿದರು.

ಆಶ್ರಮದ ಮಾತೆ ಸಿದ್ಧೇಶ್ವರಿ, ಗಣೇಶಾನಂದ ಮಹಾರಾಜ ಮಾತನಾಡಿದರು. ತೊಂಡಿಕಟ್ಟಿಯ ಅಭಿನವ ವೆಂಕಟೇಶ್ವರ ಸ್ವಾಮೀಜಿ, ಹುಣಸ್ಯಾಳದ ನಿಜಗುಣದೇವ ಸ್ವಾಮೀಜಿ, ಸೋಲಾಪುರದ ಮಾತೆ ಸುಶಾಂತಾದೇವಿ, ಮಲ್ಲಾಪುರದ ಮಾತೆ ಆನಂದಮಯಿ, ಬೆಳ್ಳೂರಿನ ಮಾತೆ ಅಮೃತಾನಂದಮಯಿ ಸಮ್ಮುಖ ವಹಿಸಿದ್ದರು. ಬೆಳಿಗ್ಗೆ ರುದ್ರಾಭಿಷೇಕ, ಸ್ತೋತ್ರ, ಭಜನೆ ಕಾರ್ಯಕ್ರಮ ಜರುಗಿದವು. ಅಪಾರ ಸಂಖ್ಯೆಯ ಭಕ್ತರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.