ADVERTISEMENT

ಬೀದರ್‌: ಜಿಲೇಬಿ ತಳ್ಳುಗಾಡಿಗೆ ಬಂತು ಗಾಜಿನ ಪರದೆ

‘ಪ್ರಜಾವಾಣಿ’ ವರದಿ ಪರಿಣಾಮ

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2025, 7:18 IST
Last Updated 15 ಆಗಸ್ಟ್ 2025, 7:18 IST
ಜಿಲೇಬಿ ಮಾರಾಟ ಮಾಡುವ ತಳ್ಳುಗಾಡಿಗಳಿಗೆ ಗಾಜಿನ ಪರದೆ ಅಳವಡಿಸಿರುವುದು
ಜಿಲೇಬಿ ಮಾರಾಟ ಮಾಡುವ ತಳ್ಳುಗಾಡಿಗಳಿಗೆ ಗಾಜಿನ ಪರದೆ ಅಳವಡಿಸಿರುವುದು   

ಬೀದರ್‌: ನಗರದ ಮಹಾವೀರ ವೃತ್ತದ ರಸ್ತೆಯುದ್ದಕ್ಕೂ ಇರುವ ಜಿಲೇಬಿ ಮಾರಾಟ ಮಾಡುವ ತಳ್ಳುಗಾಡಿಗಳಿಗೆ ಗಾಜಿನ ಪರದೆ ಹಾಕಲಾಗಿದೆ.

ಆಹಾರ ಸುರಕ್ಷತಾ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ಕೊಟ್ಟು, ಸ್ವಚ್ಛತೆಗೆ ಒತ್ತು ಕೊಡಬೇಕು. ತಳ್ಳುಗಾಡಿಗಳಿಗೆ ಗಾಜಿನ ಪರದೆ ಹಾಕಬೇಕೆಂದು ಸೂಚನೆ ಕೊಟ್ಟ ಹಿನ್ನೆಲೆಯಲ್ಲಿ ಹೀಗೆ ಮಾಡಿದ್ದಾರೆ.

‘ರಸ್ತೆ ಬದಿ ಆಹಾರ ಮಾರಾಟ; ಶುಚಿತ್ವಕ್ಕಿಲ್ಲ ಒತ್ತು’ ಶೀರ್ಷಿಕೆಯಡಿ ‘ಪ್ರಜಾವಾಣಿ’ ಆಗಸ್ಟ್‌ 4ರಂದು ವಿಶೇಷ ವರದಿ ಪ್ರಕಟಿಸಿತ್ತು. ವರದಿ ಬೆನ್ನಲ್ಲೇ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ, ಗಾಜಿನ ಪರದೆ ಇರದ ತಳ್ಳುಗಾಡಿಗಳನ್ನು ಅಲ್ಲಿಂದ ತೆರವುಗೊಳಿಸಿದರು. ಬಳಿಕ ಸಭೆ ನಡೆಸಿ, ಗಾಜಿನ ಪರದೆ ಹಾಕಿದವರಿಗೆ ಜಿಲೇಬಿ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗುವುದು ಎಂದು ಷರತ್ತು ಹಾಕಿದ್ದರು. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.