ADVERTISEMENT

ಕಮಲನಗರ: ಹಳೆ ವಿದ್ಯಾರ್ಥಿಗಳಿಂದ ಶಾಲೆಗೆ 10 ಟೇಬಲ್‍ ದೇಣಿಗೆ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2025, 13:09 IST
Last Updated 4 ಮಾರ್ಚ್ 2025, 13:09 IST
ಕಮಲನಗರ ತಾಲೂಕಿನ ಮುರ್ಕಿ ಗ್ರಾಮದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಹಳೆಯ ವಿದ್ಯಾರ್ಥಿಗಳು ಶಾಲೆಗೆ ಟೇಬಲ್‍ಗಳನ್ನು ದೇಣಿಗೆ ರೂಪದಲ್ಲಿ ನೀಡಿದರು.
ಕಮಲನಗರ ತಾಲೂಕಿನ ಮುರ್ಕಿ ಗ್ರಾಮದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಹಳೆಯ ವಿದ್ಯಾರ್ಥಿಗಳು ಶಾಲೆಗೆ ಟೇಬಲ್‍ಗಳನ್ನು ದೇಣಿಗೆ ರೂಪದಲ್ಲಿ ನೀಡಿದರು.   

ಕಮಲನಗರ: ತಾಲ್ಲೂಕಿನ ಮುರ್ಕಿ ಗ್ರಾಮದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಹಳೆಯ ವಿದ್ಯಾರ್ಥಿಗಳು ಶಾಲೆಗೆ 10 ಟೇಬಲ್‍ ದೇಣಿಗೆ ರೂಪದಲ್ಲಿ ನೀಡಿದರು.

ಮುಖ್ಯಗುರು ರಾಜು ಪೂಜಾರಿ ಮಾತನಾಡಿ, ಶಾಲೆಯ ಹಳೆಯ ವಿದ್ಯಾರ್ಥಿಗಳು 10 ಟೇಬಲ್‍ಗಳನ್ನು ದೇಣಿಗೆ ರೂಪದಲ್ಲಿ ನೀಡಿರುವ ಕಾರ್ಯ ಮಾದರಿಯಾಗಿದೆ. ಸರ್ಕಾರಿ ಶಾಲೆಗಳಲ್ಲಿ ಹಳೆಯ ವಿದ್ಯಾರ್ಥಿಗಳು ಮತ್ತು ಪೋಷಕರು ನೀಡುವ ಇಂತಹ ದೇಣಿಗೆಗಳಿಂದ ಶಾಲೆಗೆ ಅಗತ್ಯ ಸಂಪನ್ಯೂಲ ಸಂಗ್ರಹಕ್ಕೆ ಸಹಕಾರಿಯಾಗಿವೆ. ಯುವಕರ ಸಮಾಜಮುಖಿ ಕಾರ್ಯ ನಾವೆಲ್ಲರು ಗೌರವಿಸಬೇಕು ಎಂದರು.

ಎಸ್‍ಡಿಎಂಸಿ ಅಧ್ಯಕ್ಷ ಅಮರ ಠಾಕೂರ ಮಾತನಾಡಿ, ‘ಶಾಲೆ ನಮ್ಮ ಭವಿಷ್ಯ ರೂಪಿಸಿ ಬದುಕು ಕಟ್ಟಿಕೊಟ್ಟಿದೆ. ಕಲಿತ ಶಾಲೆ ಮತ್ತು ಕಲಿಸಿದ ಗುರುಗಳಿಗೆ ಗೌರವ ಸಲ್ಲಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.

ADVERTISEMENT

ಶಿಕ್ಷಕರಾವ ಅಂಕೋಶ ಖಿಂಡಿವಾಲೆ, ನಿರ್ಮಲಾ ಪಂಢಾರೆ, ಬಸವಂತ ದೇವರ್ಸೆ, ಸುನೀತಾ ಟಿಲೆ, ಶಶಿಕಾಂತ ಜಾಧವ, ಪ್ರಕಾಶ ಎಡವೆ, ಮಧುಕರ ಖಂದಾರೆ, ಸುನೀತಾ ಹಾಗೂ ಹಳೆಯ ವಿದ್ಯಾರ್ಥಿಗಳಾದ ಸಂತೋಷ ಬಾರೋಳೆ, ಉಮೇಶ ಬಿರಾದಾರ, ವಿಲಾಸ ಖಿಂಡಿವಾಲೆ, ಗೋವಿಂದ ಹಿಲಾಲಪೂರೆ, ವಿಕ್ರಮಸಿಂಗ ಠಾಕೂರ,ಜಗನ್ನಾಥ ಹಲಮಂಡಗೆ, ನೀಲಕಂಠ ಹಣಗೆ, ಲಕ್ಷ್ಮಣ ರಾಠೋಡ, ದಿಲೀಪ ಚ್ಯಾಂಡೇಶ್ವರೆ, ದೀಪಕ ಬಾರೋಳೆ, ಪ್ರದೀಪ, ದಿಲೀಪ, ಮಹೇಶ, ಪ್ರಶಾಂತ, ಕಾಲಿದಾಸ ಆಡೆ, ಓಂಕಾರ ಮಳ್ಳಾ, ಅಂಬ್ರೇಶ ಪಾಟೀಲ್, ನಿಜಾಮ ಶೇಖ, ವಿನೋದ, ಸಂದೀಪ, ಪ್ರಕಾಶ, ರವಿ, ಜ್ಞಾನೇಶ್ವರ ಹಾಗೂ ಸಿಬ್ಬಂದಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.