ADVERTISEMENT

ಬೀದರ್‌ ನಗರಸಭೆ ಆವರಣದಲ್ಲಿ ಹೊತ್ತಿ ಉರಿದ ಕಾರು

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2025, 8:45 IST
Last Updated 19 ಏಪ್ರಿಲ್ 2025, 8:45 IST
<div class="paragraphs"><p>ಬೀದರ್‌ನ ನಗರಸಭೆಯಲ್ಲಿ ಹೊತ್ತಿ ಉರಿದ ಕಾರನ್ನು ಅಗ್ನಿ ಶಾಮಕ ಸಿಬ್ಬಂದಿ ನಂದಿಸಿದರು</p></div>

ಬೀದರ್‌ನ ನಗರಸಭೆಯಲ್ಲಿ ಹೊತ್ತಿ ಉರಿದ ಕಾರನ್ನು ಅಗ್ನಿ ಶಾಮಕ ಸಿಬ್ಬಂದಿ ನಂದಿಸಿದರು

   

ಬೀದರ್‌: ಇಲ್ಲಿನ ನಗರಸಭೆ ಆವರಣದಲ್ಲಿ ನಿಲ್ಲಿಸಿದ ಕಾರು ಶನಿವಾರ ಧಗಧಗನೆ ಹೊತ್ತಿ ಉರಿದಿದೆ.

ನಗರಸಭೆ ಮಾಜಿ ಉಪಾಧ್ಯಕ್ಷ ಅಂಬರೀಶ್‌ ಸ್ವಾಮಿ ಎಂಬುವವರಿಗೆ ಈ ಕಾರು ಸೇರಿತ್ತು. ಕೆಲಸದ ನಿಮಿತ್ತ ಅವರು ಆವರಣದಲ್ಲಿ ಕಾರು ನಿಲ್ಲಿಸಿ ಕಚೇರಿಯೊಳಗೆ ಹೋಗಿದ್ದರು. ಕೆಲ ಸಮಯದ ನಂತರ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಹೊತ್ತಿ ಉರಿದಿದೆ.

ADVERTISEMENT

ಬೆಂಕಿಯ ಆರ್ಭಟಕ್ಕೆ ಕಾರು ಸಂಪೂರ್ಣ ಸುಟ್ಟು ಕರಕಲಾಗಿದೆ. ವಿಷಯ ತಿಳಿದು ಅಗ್ನಿಶಾಮದ ದಳದ ಸಿಬ್ಬಂದಿ ಸ್ಥಳಕ್ಕೆ ಬಂದು ಬೆಂಕಿ ನಂದಿಸುವ ಹೊತ್ತಿ ಕಾರು ಸುಟ್ಟು ಹೋಗಿದೆ.

ಎಮ್‌ಎಚ್‌03 ಎಆರ್‌ 8550 ಸಂಖ್ಯೆಯ ಇಂಡಿಕಾ ವಿಸ್ತಾ ಕಾರ್‌ ಇದಾಗಿದೆ. ಘಟನೆಗೆ ಇನ್ನಷ್ಟೇ ನಿಖರ ಕಾರಣ ಗೊತ್ತಾಗಬೇಕಿದೆ. ಮಾರ್ಕೆಟ್‌ ಪೊಲೀಸ್‌ ಠಾಣೆಯ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.