ADVERTISEMENT

ಬೀದರ್‌ | ಶಾಲಾ ವಾಹನ ಡಿಕ್ಕಿ: ವಿದ್ಯಾರ್ಥಿನಿ ಸಾವು

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2025, 17:07 IST
Last Updated 9 ಡಿಸೆಂಬರ್ 2025, 17:07 IST
<div class="paragraphs"><p>ಸಾವು&nbsp; (ಪ್ರಾತಿನಿಧಿಕ ಚಿತ್ರ)</p></div>

ಸಾವು  (ಪ್ರಾತಿನಿಧಿಕ ಚಿತ್ರ)

   

ಬೀದರ್‌: ಖಾಸಗಿ ಶಾಲಾ ವಾಹನ ಡಿಕ್ಕಿ ಹೊಡೆದು ವಿದ್ಯಾರ್ಥಿನಿಯೊಬ್ಬರು ಮೃತಪಟ್ಟ ಘಟನೆ ತಾಲ್ಲೂಕಿನ ಜನವಾಡದಲ್ಲಿ ಮಂಗಳವಾರ ನಡೆದಿದೆ.

ಜನವಾಡದ ಪೊಲೀಸ್ ಕ್ವಾಟರ್ಸ್‍ನಲ್ಲಿ ವಾಸವಾಗಿರುವ ಔರಾದ್ ತಾಲ್ಲೂಕಿನ ಗಡಿಕುಶನೂರ ಗ್ರಾಮದ ಸುನೀಲಕುಮಾರ ಅವರ ಪುತ್ರಿ, 3ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಋತ್ವಿಕಾ (9) ಮೃತಪಟ್ಟವರು.

ADVERTISEMENT

ಗ್ರಾಮದ ಖಾಸಗಿ ಶಾಲೆಯಲ್ಲಿ ಓದುತ್ತಿದ್ದ ವಿದ್ಯಾರ್ಥಿನಿಯನ್ನು ಶಾಲೆಯ ಚಾಲಕ ವಾಹನದಲ್ಲಿ ಪೊಲೀಸ್ ಕ್ವಾಟರ್ಸ್ ಸಮೀಪ ತಂದು ಇಳಿಸಿದ್ದರು. ಬಳಿಕ ಚಾಲಕನ ನಿಷ್ಕಾಳಜಿಯಿಂದ ಬಸ್ ಮುಂಭಾಗದಲ್ಲಿದ್ದ ವಿದ್ಯಾರ್ಥಿನಿಗೆ ವಾಹನ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ ಎಂದು ಜನವಾಡ ಠಾಣೆ ಪಿಎಸ್‍ಐ ಬಾಷಾಮಿಯ ತಿಳಿಸಿದ್ದಾರೆ.

ಘಟನೆಯಲ್ಲಿ ಗಂಭೀರ ಗಾಯಗೊಂಡಿದ್ದ ವಿದ್ಯಾರ್ಥಿನಿ ವಾಹನದಲ್ಲಿ ಬೀದರ್‍ನ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ ಎಂದು ಹೇಳಿದ್ದಾರೆ.

ಋತ್ವಿಕಾ ಅವರ ತಾಯಿ ರೇಣುಕಾ ಪೊಲೀಸ್ ಕಾನ್‍ಸ್ಟೇಬಲ್ ಆಗಿದ್ದಾರೆ. ಜನವಾಡದ ಪೊಲೀಸ್ ಕ್ವಾಟರ್ಸ್‍ನಲ್ಲಿ ಕುಟುಂಬದ ಜತೆ ವಾಸವಾಗಿದ್ದಾರೆ.

ಡಿ.ವೈ.ಎಸ್.ಪಿ. ಸನದಿ, ಬೀದರ್ ಗ್ರಾಮೀಣ ಸಿ.ಪಿ.ಐ. ಜಿ.ಎಸ್. ಬಿರಾದಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಜನವಾಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.