ADVERTISEMENT

ರೋಟರಿ ಕ್ಲಬ್‍ನಿಂದ ಟ್ಯಾಬ್ಲೆಟ್ ಕೊಡುಗೆ

​ಪ್ರಜಾವಾಣಿ ವಾರ್ತೆ
Published 12 ಜೂನ್ 2020, 15:56 IST
Last Updated 12 ಜೂನ್ 2020, 15:56 IST
ಬೀದರ್‌ನಲ್ಲಿ ಶುಕ್ರವಾರ ರೋಟರಿ ಕ್ಲಬ್ ಆಫ್ ಬೀದರ್ ನ್ಯೂ ಸೆಂಚುರಿ ಅಧ್ಯಕ್ಷೆ ಡಾ.ಶ್ವೇತಾ ಮೇಗೂರ ಅವರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ವಿ.ಜಿ. ರೆಡ್ಡಿ ಅವರಿಗೆ ಟ್ಯಾಬ್ಲೆಟ್ ಕೊಡುಗೆಯಾಗಿ ನೀಡಿದರು
ಬೀದರ್‌ನಲ್ಲಿ ಶುಕ್ರವಾರ ರೋಟರಿ ಕ್ಲಬ್ ಆಫ್ ಬೀದರ್ ನ್ಯೂ ಸೆಂಚುರಿ ಅಧ್ಯಕ್ಷೆ ಡಾ.ಶ್ವೇತಾ ಮೇಗೂರ ಅವರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ವಿ.ಜಿ. ರೆಡ್ಡಿ ಅವರಿಗೆ ಟ್ಯಾಬ್ಲೆಟ್ ಕೊಡುಗೆಯಾಗಿ ನೀಡಿದರು   

ಬೀದರ್: ಕೋವಿಡ್ 19 ಸೋಂಕಿನ ಮಾಹಿತಿ ಪರಿಷ್ಕರಣೆಗಾಗಿ ರೋಟರಿ ಕ್ಲಬ್ ಆಫ್ ಬೀದರ್ ನ್ಯೂ ಸೆಂಚುರಿಯು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಸ್ಯಾಮ್‍ಸಂಗ್ ಟ್ಯಾಬ್ಲೆಟ್ ಕೊಡುಗೆಯಾಗಿ ನೀಡಿದೆ.

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ಕ್ಲಬ್ ಅಧ್ಯಕ್ಷೆ ಶ್ವೇತಾ ಮೇಗೂರ ಅವರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ವಿ.ಜಿ. ರೆಡ್ಡಿ ಅವರಿಗೆ ಟ್ಯಾಬ್ಲೆಟ್ ಹಸ್ತಾಂತರಿಸಿದರು.

‘ಜಿಲ್ಲಾಧಿಕಾರಿ ಜತೆ ಚರ್ಚೆ ನಡೆಸಿ ಅವರ ನಿರ್ದೇಶನದ ಮೇರೆಗೆ ಟ್ಯಾಬ್ಲೆಟ್ ಕೊಡಲಾಗಿದೆ’ ಎಂದು ತಿಳಿಸಿದರು.

ADVERTISEMENT

ಜಿಲ್ಲಾಧಿಕಾರಿ ರಾಮಚಂದ್ರನ್ ಆರ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗ್ಯಾನೇಂದ್ರಕುಮಾರ ಗಂಗ್ವಾರ್, ರೋಟರಿ ಕ್ಲಬ್ ಆಫ್ ಬೀದರ್ ನ್ಯೂ ಸೆಂಚುರಿ ಕಾರ್ಯದರ್ಶಿ ಡಾ. ನಿತೇಶಕುಮಾರ ಬಿರಾದಾರ, ಸಹ ಕಾರ್ಯದರ್ಶಿ ಕಪಿಲ್ ಪಾಟೀಲ, ಸೂರ್ಯಕಾಂತ ರಾಮಶೆಟ್ಟಿ, ನಿತಿನ್ ಕರ್ಪೂರ್, ಸುಧೀಂದ್ರ ಸಿಂದೋಲ್, ಡಾ. ರಿತೇಶ ಸಲಗಾಂವಕರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.