ADVERTISEMENT

ಹುಮನಾಬಾದ್: ಈಜಲು ಕೆರೆಗೆ ಇಳಿದ ನಾಲ್ವರು ನೀರು ಪಾಲು

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2021, 10:49 IST
Last Updated 3 ಅಕ್ಟೋಬರ್ 2021, 10:49 IST
ಅಗ್ನಿಶಾಮಕ ದಳದ ಸಿಬ್ಬಂದಿ ಶೋಧ ಕಾರ್ಯ ನಡೆಸುತ್ತಿರುವ ದೃಶ್ಯ
ಅಗ್ನಿಶಾಮಕ ದಳದ ಸಿಬ್ಬಂದಿ ಶೋಧ ಕಾರ್ಯ ನಡೆಸುತ್ತಿರುವ ದೃಶ್ಯ   

ಹುಮನಾಬಾದ್ (ಬೀದರ್ ಜಿಲ್ಲೆ):ತಾಲ್ಲೂಕಿನ ಘೋಡವಾಡಿ ಗ್ರಾಮದ ಇಸ್ಮಾಯಿಲ್ ಖಾದ್ರಿ ದರ್ಗಾ ಸಮೀಪದ ಕೆರೆಯಲ್ಲಿ ಭಾನುವಾರ ಈಜಲು ಹೋಗಿದ್ದ ನಾಲ್ವರು ನೀರು ಪಾಲಾಗಿದ್ದಾರೆ.

ಹೈದರಾಬಾದ್ ಬೊರಾಬಂಡಾ ನಿವಾಸಿಗಳಾದ ಸೈಯದ್ ಅಕ್ಬರ್ ಸೈಯದ್ ಉಸ್ಮಾನ್ (17), ಮಹಮ್ಮದ್ ಜುಲೇದ್ ಖಾನ್( 19), ಮಹಮ್ಮದ್ ಫಾದಖಾನ್ ಸಲೀಂ ಖಾನ್ (18) ಮತ್ತು ಸೈಯದ್ ಜುನೇದ್ ಸೈಯದ್ ಖಾಲೆದ್ (15) ನೀರು ಪಾಲದವರೆಂದು ತಿಳಿದು ಬಂದಿದೆ .

ನಾಲ್ವರ ಪೈಕಿ ಸೈಯದ್ ಅಕ್ಬರ್ ಶವ ಪತ್ತೆಯಾಗಿದೆ. ಉಳಿದವರ ಶವಗಳಿಗಾಗಿ ಶೋಧಕಾರ್ಯ ಮುಂದುವರಿದಿದೆ. ಹುಮನಾಬಾದ್ ಠಾಣೆಯ ಪಿಎಸ್ಐ ರವಿಕುಮಾರ ನಾಯ್ಕೋಡಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ADVERTISEMENT

ಸ್ಥಳಿಯರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಮೂವರ ಹುಡುಕಾಟ ನಡೆಸಿದ್ದಾರೆ. ಕೆರೆಯ ಸುತ್ತ ನೂರಾರು ಜನ ಜಮಾಯಿಸಿದ್ದಾರೆ.

ಘೋಡವಾಡಿ ಗ್ರಾಮದ ಇಸ್ಮೈಲ್ ಖಾದ್ರಿ ದರ್ಗಾಕ್ಕೆ, ಪ್ರತಿ ಗುರುವಾರ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ದರ್ಶನಕ್ಕೆ ಬರುತ್ತಾರೆ. ಈ ಯುಬಕರು ಸಹ ದರ್ಗಾಕ್ಕೆ ಬಂದಿದ್ದರು ಎಂದು ಮಾಹಿತಿ ಲಭ್ಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.