ADVERTISEMENT

ಔರಾದ್: ಬಾವಿಗೆ ಬಿದ್ದ ಎಮ್ಮೆ ರಕ್ಷಣೆ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2025, 15:19 IST
Last Updated 6 ಮಾರ್ಚ್ 2025, 15:19 IST

ಔರಾದ್: ತಾಲ್ಲೂಕಿನ ಹೊಕ್ರಣಾ ಗ್ರಾಮದಲ್ಲಿ ಬಾವಿಗೆ ಬಿದ್ದಿದ್ದ ಎಮ್ಮೆಯನ್ನು ಅಗ್ನಿಶಾಮಕದಳ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ.

ಗ್ರಾಮದ ದಿಗಂಬರರಾವ್ ಮಾರುತಿರಾವ ಎಂಬುವರ ಎಮ್ಮೆ ಎರಡು ದಿನದ ಹಿಂದೆ ಮೇಯುತ್ತಾ ಹೋಗಿ ಬಾವಿಯಲ್ಲಿ ಬಿದ್ದಿದೆ. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಗ್ರಾಮಸ್ಥರ ಹಾಗೂಐ ಜೆಸಿಬಿ ಸಹಾಯದಿಂದ ಎಮ್ಮೆಯನ್ನು ಮೇಲಕ್ಕೆ ಎತ್ತಿದ್ದಾರೆ.

ಅಗ್ನಿಶಾಮಕ ಠಾಣಾಧಿಕಾರಿ ಮಾಳಿಂಗರಾಯ, ಸಿಬ್ಬಂದಿಗಳಾದ ಅಮರನಾಥ, ಅಂಬರೀಶ್, ಶಿವಾನಂದ, ಜಟ್ಟಿಂಗರಾಯ, ಮಿತ್ರಾ, ಪಂಪಾಪತಿ, ಸುರೇಶ ಅಚ್ಚಿಗಾಂವೆ ಕಾರ್ಯಾಚರಣೆಯಲ್ಲಿ ‌ಪಾಲ್ಗೊಂಡರು. ರಾತ್ರಿ ವೇಳೆ ಬಂದು ಬಾವಿಯಿಂದ ಎಮ್ಮೆ ತೆಗೆದು ರಕ್ಷಣೆ ಮಾಡಿದ ಅಗ್ಗಿಶಾಮಕ ಸಿಬ್ಬಂದಿ ‌ಕಾರ್ಯಕ್ಕೆ ಹೊಕ್ರಾಣ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.