ಭಾಲ್ಕಿ: ತಾಲ್ಲೂಕಿನ ಕಲವಾಡಿ ಗ್ರಾಮದ ಬಸವೇಶ್ವರ ವೃತ್ತಕ್ಕೆ ಸೋಮವಾರ ರಾತ್ರಿ ಕಾರೊಂದು ಡಿಕ್ಕಿ ಹೊಡೆದಿದೆ.
ಬಸವೇಶ್ವರ ವೃತ್ತ ನೆಲಕ್ಕುರುಳಿದೆ. ರಸ್ತೆ ಪಕ್ಕದ ಮನೆ ಮುಂದೆ ಮಲಗಿದ್ದ ಎಮ್ಮೆ ಸಾವನ್ನಪ್ಪಿದೆ. ಬೊಲೆರೊ ಪಿಕ್‍ಅಪ್ ವಾಹನಕ್ಕೆ ಹಾನಿಯಾಗಿದೆ.
ಸ್ವಿಫ್ಟ್ ಕಾರ್, ಬ್ರೆಜರ್ ವಾಹನ ಚಾಲಕರ ನಿರ್ಲಕ್ಷದಿಂದ ಈ ಘಟನೆ ನಡೆದಿದೆ.
ಸ್ಥಳಕ್ಕೆ ಡಿವೈಎಸ್ಪಿ ದೇವರಾಜ್ ಬಿ., ಸಿಪಿಐ ಭೇಟಿ ನೀಡಿ ಹೆಚ್ಚಿನ ಮಾಹಿತಿ ಕಲೆ ಹಾಕಿದ್ದಾರೆ. ತಪ್ಪಿತಸ್ಥರ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.