ADVERTISEMENT

ಕಾಯ್ದೆಗಳ ಅನುಷ್ಠಾನ ಅಧಿಕಾರಿಗಳ ಹೊಣೆ: ಶಿವಕುಮಾರ ಶೀಲವಂತ

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2018, 16:07 IST
Last Updated 17 ನವೆಂಬರ್ 2018, 16:07 IST
ಬೀದರ್‌ನ ಚಿಕ್ಕಪೇಟದಲ್ಲಿ ನಡೆದ ಚೈಲ್ಡ್‌ಲೈನ್‌ ಸೇ ದೋಸ್ತಿ ವೀಕ್ ಮತ್ತು ಮಕ್ಕಳ ಮೇಳದಲ್ಲಿ ನೇಳಗಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ರಾಜಕುಮಾರ, ಮಕ್ಕಳ ರಕ್ಷಣಾ ಅಧಿಕಾರಿ ಗೌರಿಶಂಕರ ಪರತಾಪುರೆ ಹಾಗೂ ಮನ್ನಳ್ಳಿ ಪಿಡಿಒ ಕುಮುದಾ ಅವರನ್ನು ಸನ್ಮಾನಿಸಲಾಯಿತು. ಶಿವಕುಮಾರ ಶೀಲವಂತ, ಸಾವನ್ ವಾಗ್ಲೆ, ಮನೋಹರ, ಎಸ್.ವೈ.ಹುಣಸಿಕಟ್ಟಿ, ಕವಿತಾ ಹುಷಾರೆ ಇದ್ದಾರೆ
ಬೀದರ್‌ನ ಚಿಕ್ಕಪೇಟದಲ್ಲಿ ನಡೆದ ಚೈಲ್ಡ್‌ಲೈನ್‌ ಸೇ ದೋಸ್ತಿ ವೀಕ್ ಮತ್ತು ಮಕ್ಕಳ ಮೇಳದಲ್ಲಿ ನೇಳಗಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ರಾಜಕುಮಾರ, ಮಕ್ಕಳ ರಕ್ಷಣಾ ಅಧಿಕಾರಿ ಗೌರಿಶಂಕರ ಪರತಾಪುರೆ ಹಾಗೂ ಮನ್ನಳ್ಳಿ ಪಿಡಿಒ ಕುಮುದಾ ಅವರನ್ನು ಸನ್ಮಾನಿಸಲಾಯಿತು. ಶಿವಕುಮಾರ ಶೀಲವಂತ, ಸಾವನ್ ವಾಗ್ಲೆ, ಮನೋಹರ, ಎಸ್.ವೈ.ಹುಣಸಿಕಟ್ಟಿ, ಕವಿತಾ ಹುಷಾರೆ ಇದ್ದಾರೆ   

ಬೀದರ್: ‘ಮಕ್ಕಳ ಉತ್ತಮ ಪಾಲನೆ ಪೋಷಣೆಗೆ ಅನೇಕ ಕಾಯ್ದೆಗಳು ರಚನೆಯಾಗಿವೆ. ಅವುಗಳನ್ನು ಕಾರ್ಯರೂಪಕ್ಕೆ ತರುವುದು ಅಧಿಕಾರಿಗಳ ಹೊಣೆಯಾಗಿದೆ’ ಎಂದು ಬೀದರ್‌ ಉಪ ವಿಭಾಗಾಧಿಕಾರಿ ಶಿವಕುಮಾರ ಶೀಲವಂತ ಹೇಳಿದರು.

ನಗರದ ಚಿಕ್ಕಪೇಟನಲ್ಲಿ ಮಕ್ಕಳ ಸಹಾಯವಾಣಿ 1098 ಹಾಗೂ ಡಾನ್ ಬೋಸ್ಕೊ ವತಿಯಿಂದ ಶನಿವಾರ ಆಯೋಜಿಸಿದ್ದ ಚೈಲ್ಡ್‌ಲೈನ್‌ ಸೇ ದೋಸ್ತಿ ವೀಕ್ ಮತ್ತು ಮಕ್ಕಳ ಮೇಳದಲ್ಲಿ ಅವರು ಮಾತನಾಡಿದರು.

‘ಮಕ್ಕಳ ಭವಿಷ್ಯ ರೂಪಿಸಲು ಗುಣಮಟ್ಟದ ಶಿಕ್ಷಣ ನೀಡುವುದು ಅಗತ್ಯವಾಗಿದೆ. ಮಕ್ಕಳನ್ನು ಶಾಲೆಗೆ ಕಳಿಸುವುದು ಪಾಲಕರ ಜವಾಬ್ದಾರಿಯಾಗಿದೆ’ ಎಂದು ತಿಳಿಸಿದರು.

ADVERTISEMENT

ಕ್ಷೇತ್ರ ಶಿಕ್ಷಣಾಧಿಕಾರಿ ವಿಠೋಬಾ ಪತ್ತಾರ ಮಾತನಾಡಿ, ‘ಮಕ್ಕಳು ಚೈಲ್ಡ್‍ ಲೈನ್ ಕಾರ್ಯಕ್ರಮವನ್ನು ರಾಖಿ ಕಟ್ಟುವುದರ ಮೂಲಕ ಉದ್ಘಾಟಿಸಿದ್ದಾರೆ. ಹೀಗಾಗಿ ಮಕ್ಕಳಿಗೆ ರಕ್ಷಣೆ ಕೊಡುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದೆ’ ಎಂದು ಹೇಳಿದರು.

ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ಕವಿತಾ ಹುಷಾರೆ ಮಾತನಾಡಿ, ‘ಚೈಲ್ಡ್‍ ಲೈನ್ ಸೇವೆಯು ದಿನದ 24 ಗಂಟೆ ಕಾರ್ಯನಿರ್ವಹಿಸುತ್ತದೆ. ಯಾವುದೇ ರೀತಿಯ ಸಮಸ್ಯೆ ಇದ್ದರೆ ಮಕ್ಕಳು 1098 – ಮಕ್ಕಳ ಸಹಾಯವಾಣಿಗೆ ನಿರ್ಭಯವಾಗಿ ಕರೆಮಾಡಬಹುದು’ ಎಂದರು.

ಭಾಲ್ಕಿ ಉಪ ಕೇಂದ್ರದ ಚೈಲ್ಡ್‍ ಲೈನ್‌ ನಿರ್ದೇಶಕ ಶಫಿಯೊದ್ದೀನ್, ಡಾನ್ ಬೋಸ್ಕೊ ಚೈಲ್ಡ್ ಲೈನ್ ನಿರ್ದೇಶಕ ಫಾದರ್ ಜೇಮ್ಸ್ ಪೌಲ್, ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷ ಸಾವನ್ ವಾಗ್ಲೆ ಮಾತನಾಡಿದರು.

ನಗರಸಭೆ ಆಯುಕ್ತ ಮನೋಹರ ಅವರು ವಾರ್ಷಿಕ ವರದಿ ಬಿಡುಗಡೆ ಮಾಡಿದರು. ಮಕ್ಕಳ ಹಕ್ಕುಗಳ ಜಾಗೃತಿಯಲ್ಲಿ ತೊಡಗಿಸಿಕೊಂಡಿರುವ ನೇಳಗಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ರಾಜಕುಮಾರ, ಮಕ್ಕಳ ರಕ್ಷಣಾ ಅಧಿಕಾರಿ ಗೌರಿಶಂಕರ ಪರತಾಪುರೆ ಹಾಗೂ ಮನ್ನಳ್ಳಿ ಪಿಡಿಒ ಕುಮುದಾ ಅವರನ್ನು ಸನ್ಮಾನಿಸಲಾಯಿತು.

ಡಾನ್ ಬೋಸ್ಕೊ ಸಂಸ್ಥೆಯ ಆಡಳಿತಾಧಿಕಾರಿ ಫಾದರ್ ಸ್ಟಿವನ್ ಲಾರೆನ್ಸ್, ಪ್ರಾಚಾರ್ಯ ಫಾದರ್ ಆ್ಯಂಡ್ರೂ, ನವಿನಕುಮಾರ, ಡಿ.ಸಿ.ಪಿ.ಒ ಗೌರಿ ಶಂಕರ, ರೇಣುಕಾ ಹಾಗೂ ರಾಜಶೇಖರ, ನೆಲ್ಸನ್ ರಾಚೆ, ಸಂತೋಷ ಪಿ. ರಘುವೇಲ, ಜಾನ್ಸನ್,ಗೀತಾ, ಎಸ್ತೇರಾ, ಪವಿತ್ರಾ, ಮಂಜುಳಾ ರವಿಕುಮಾರ, ಪ್ರಭಾಕರ, ಡ್ಯಾನಿಯಲ್ ಮೇತ್ರೆ, ಡ್ಯಾನಿಯಲ್ ಸಾಗರ ಹಾಗೂ ಗಿರಿಜಾ ಇದ್ದರು. ಸವಿತಾ ಸೂರ್ಯವಂಶಿ ನಿರೂಪಿಸಿದರು. ಸಾಲೋಮನ್ ವಂದಿಸಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.